ಒಂದು ದಿನ ಮೊದಲೇ ಸ್ವಾತಂತ್ರ್ಯೋತ್ಸವ!

7

ಒಂದು ದಿನ ಮೊದಲೇ ಸ್ವಾತಂತ್ರ್ಯೋತ್ಸವ!

Published:
Updated:
ಒಂದು ದಿನ ಮೊದಲೇ ಸ್ವಾತಂತ್ರ್ಯೋತ್ಸವ!

ಸಿದ್ದಾಪುರ (ಕೊಡಗು ಜಿಲ್ಲೆ): ಸ್ವಾತಂತ್ರ್ಯ ದಿನವನ್ನು ದೇಶದಾದ್ಯಂತ ಆ.15ರಂದು ಆಚರಿಸುವುದು ವಾಡಿಕೆ. ಆದರೆ ಸಮೀಪದ ಕಣ್ಣಂಗಾಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನೌಕರರು ಒಂದು ದಿನ ಮುಂಚಿತವಾಗಿಯೇ (ಆ. 14 ರಂದು) ರಾಷ್ಟ್ರ ಧ್ವಜಾರೋಹಣ ಮಾಡಿರುವ ಘಟನೆ ವರದಿಯಾಗಿದೆ.ಕಣ್ಣಂಗಾಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಭಾನುವಾರ ಮಧ್ಯಾಹ್ನ 12.30ಕ್ಕೆ ರಾಷ್ಟ್ರಧ್ವಜ ಹಾರಾಡುತ್ತಿತ್ತು. ಸೋಮವಾರ ಬೆಳಿಗ್ಗೆ ಬಂದು ಧ್ವಜಾರೋಹಣ ಮಾಡುವ ಬದಲು ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಮತ್ತು ಸಿಬ್ಬಂದಿ ಒಂದು ದಿನ ಮುಂಚಿತವಾಗಿಯೇ ಸ್ವಾತಂತ್ರ್ಯೋತ್ಸವ ಆಚರಿಸಿ ಆರೋಗ್ಯ ಕೇಂದ್ರಕ್ಕೆ ಬೀಗ ಹಾಕಿಕೊಂಡು ಹೋಗಿದ್ದಾರೆ.ಸ್ವಾತಂತ್ರ್ಯ ದಿನಾಚರಣೆ ಮುನ್ನಾ ದಿನವೇ ಧ್ವಜಾರೋಹಣ ಮಾಡಿರುವುದಕ್ಕೆ ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿ ಆರೋಗ್ಯಾಧಿಕಾರಿ ಮತ್ತು ಸಿಬ್ಬಂದಿ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಜಾ ದಿನವನ್ನು ಮಜವಾಗಿ ಕಳೆಯುವ ಸಲುವಾಗಿ ವೈದ್ಯಾಧಿಕಾರಿ ಮತ್ತು ಸಿಬ್ಬಂದಿ ಶಿಷ್ಟಾಚಾರವನ್ನು ಉಲ್ಲಂಘಿಸಿ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ನೆಲ್ ರಾವ್ ಟವರ್‌ನಲ್ಲಿನ ಜೆಟ್ ಕಿಂಗ್ ಕಂಪೆನಿಯ ಅಧಿಕಾರಿಗಳು ಮುಂಜಾನೆ ವೇಳೆಗೆ ಕಟ್ಟಡದ ಮುಂಭಾಗದಲ್ಲಿಯೇ ಧ್ವಜ ಕಂಬ ನೆಟ್ಟು ರಾಷ್ಟ್ರಧ್ವಜ ಹಾರಿಸಿದ್ದಾರೆ. ಇನ್ನು ಇದೇ ಕೈಗಾರಿಕಾ ಪ್ರದೇಶದಲ್ಲಿರುವ ಜಿ.ಇ. ಹೇಲ್ತ್ ಕೇರ್ ಕಂಪೆನಿಯ ಅಧಿಕಾರಿಗಳು ಕೂಡ ತಮ್ಮ ಕಟ್ಟಡದ ಮುಂಭಾಗದಲ್ಲಿ ಧ್ವಜಾರೋಹಣ ನೆರವೇರಿಸಿದ್ದಾರೆ. ಇದು ಅಮೆರಿಕದ ಕಂಪೆನಿ ಎಂದು ತಿಳಿದು ಬಂದಿದೆ.ಧ್ವಜಾರೋಹಣ ಕುರಿತು ಕಂಪೆನಿಯ ಸೆಕ್ಯೂರಿಟಿ ಗಾರ್ಡ್ ಅವರನ್ನು ಪ್ರಶ್ನಿಸಿದಾಗ, `ಕಳೆದ ವರ್ಷ ಕೂಡ ಸ್ವಾತಂತ್ರ್ಯ ದಿನಾಚರಣೆ ಮುನ್ನಾ ದಿನ ಸಂಜೆಯೇ ಧ್ವಜಾರೋಹಣ ನೆರವೇರಿಸಲಾಗಿತ್ತು. ಈ ಬಾರಿ ಕೂಡ ಹಾಗೇ ಮಾಡಲಾಗಿದೆ. ಕಾರಣ ಆಗಸ್ಟ್ 15ರಂದು ಮುಂಜಾನೆ ವೇಳೆ ಕಂಪೆನಿಗೆ ಯಾವ ನೌಕರರು ಬರುವುದಿಲ್ಲ. ಹಾಗಾಗಿ ಮುಂಚಿತವಾಗಿ ಧ್ವಜ ಹಾರಿಸಲಾಗುತ್ತದೆ~ ಎಂದು ಸ್ಪಷ್ಟಪಡಿಸಿದರು.`ಸ್ವಾತಂತ್ರ್ಯ ದಿನದ ಮುನ್ನ ಇಪಿಐಪಿ ಕೈಗಾರಿಕಾ ಪ್ರದೇಶದಲ್ಲಿನ ಕೆಲ ಅಂತರಾಷ್ಟ್ರೀಯ ಕಂಪೆನಿಗಳು ಉದ್ದೇಶಪೂರಕವಾಗಿ ಧ್ವಜಾರೋಹಣ ಮಾಡುತ್ತಿವೆ. ಇದು ದೇಶಾಭಿಮಾನಕ್ಕೆ ಧಕ್ಕೆ ತರುವಂತಹ ವಿಚಾರ. ಇದನ್ನು ತಡೆಯಲು ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು~ ಎಂದು ಸ್ಥಳೀಯ ಸುವರ್ಣ ಕನ್ನಡ ಸಂಘದ ಮುಖಂಡ ರಾಮಾಂಜಿನಪ್ಪ ಆಗ್ರಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry