ಗುರುವಾರ , ನವೆಂಬರ್ 21, 2019
21 °C
ದೇವನಹಳ್ಳಿ ವಿಧಾನ ಸಭೆ ಮೀಸಲು ಕ್ಷೇತ್ರ

ಒಂದು ನಾಮಪತ್ರ ತಿರಸ್ಕೃತ

Published:
Updated:

ದೇವನಹಳ್ಳಿ: `ದೇವನಹಳ್ಳಿ ವಿಧಾನ ಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಹದಿನೆಂಟು ಸ್ಪರ್ಧಿಗಳಲ್ಲಿ ಹದಿನೇಳು ನಾಮಪತ್ರಗಳಲ್ಲಿ ಒಂದು ನಾಮಪತ್ರ ತಿರಸ್ಕೃತಗೊಂಡಿದೆ' ಎಂದು ಚುನಾವಣಾಧಿಕಾರಿ ಆರ್.ಸುಮಾ ತಿಳಿಸಿದ್ದಾರೆ. ಅಭ್ಯರ್ಥಿಗೆ ಸೂಚಕರಾಗಿರುವವರು ದೇವನಹಳ್ಳಿ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಇರಬೇಕೆಂಬ ಚುನಾವಣಾ ನಿಯಮ ಪಾಲಿಸದ ಹಿನ್ನೆಲೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಶಿಡ್ಲಘಟ್ಟ ತಾಲ್ಲೂಕಿನ ವೆಂಕಟೇಶ್ ಅವರ ಅರ್ಜಿಯನ್ನು ತಿರಸ್ಕರಿಸಲಾಗಿದೆ.

ಪ್ರತಿಕ್ರಿಯಿಸಿ (+)