ಒಂದು ಲಾಲಿ ಪದ್ಯ

7

ಒಂದು ಲಾಲಿ ಪದ್ಯ

Published:
Updated:

ದೂರೀ ದೂರಿಣ  ದೂರೀ ದೂರಿ

ದೂರೀ ದೂರಿ ಣ ದೂರಮ್ಮಾ ದೂರಿ

ದೂರಿ ಬಂತಮ್ಮಾ ಣ ದೂರೀ ದೂರಿ

ದೂರು ಯಾರ ಮೇಲೆಣ ದೂರೀ ದೂರಿ

ದೂರು ನಿನ್ನ ಮೇಲೆಣ ದೂರೀ ದೂರಿ

ದೂರು ಕೊಟ್ಟವರಾರುಣ ದೂರೀ ದೂರಿ

ಕೃಷ್ಣ ಬಲರಾಮರುಣ ದೂರೀ ದೂರಿ

ಆ ಗೊಲ್ಲಾರ ಹುಡುಗಾರುಣ ದೂರೀ ದೂರಿ

ಬಲು ಪುಂಡು ಹುಡುಗಾರುಣ ದೂರೀ ದೂರಿ

ಓ ದೂರು ಕೊಟ್ಟವರೇಣ ದೂರೀ ದೂರಿ

ಆ ದೂರಿಗೆ ಕಾರಣಣ ದೂರೀ ದೂರಿ

ನೀ ಬೈಕ್ ಮೇಲೆ ಹೋಗುತ್ತಿದ್ದೆಣ ದೂರೀ ದೂರಿ

ನೀ ಸ್ಪೀಡಾಗಿ ಹೋಗುತ್ತಿದ್ದೆಣ ದೂರೀ ದೂರಿ

ಆ ಸ್ಪೀಡಿಗೆ ಗಾಳಿ ಎದ್ದೂಣ ದೂರೀ ದೂರಿ

ಆ ಕೃಷ್ಣಾನ ನವಿಲುಗರೀಣ ದೂರೀ ದೂರಿನಿನ್ನ ಬೈಕ್ ಮೇಲೆ ಕೂತಿತುಣ ದೂರೀ ದೂರಿ

ಇದು ದೂರಿಗೆ ಕಾರಣಾಣ ದೂರೀ ದೂರಿ

ನಿನ್ನ ಮೇಲೆ ದೂರ್ ಕೇಳಿ ನಿಮ್ಮವ್ವಣ ದೂರೀ

ದುಕ್ಕಳಿಸಿ ಅಳುತಾಳೆಣ ದೂರೀ ದೂರಿ

ನಿಂತವ್ನೆ ಜಗಳಕ್ಕೆ ನಿಮ್ಮಣ್ಣಣ ದೂರೀ

ಆ ದೂರದ ಊರಿಂದಣ ದೂರೀ ದೂರಿನಿಮ್ಮ ದೊಡ್ಡಮ್ಮ ಬಂದವ್ಳೆಣ ದೂರೀ ದೂರಿ

`ನೀ ದೂರ ಕೊಡು ಅಂತವ್ಳೆಣ ದೂರೀ ದೂರಿ

ಆ ಕೃಷ್ಣನ ನವಿಲುಗರಿಣ ದೂರೀ ದೂರಿ

ನನ್ನ ಬೈಕ್ ಮೇಲೆ ಕೂತಿತುಣ ದೂರೀ ದೂರಿ

ಈ ದೂರು ಕೊಡು ಅಂತವ್ಳೆ~ಣ ದೂರೀ ದೂರಿ

ಆ ನಿಮ್ಮಾಟ ಕಂಡೂಣ ದೂರೀ ದೂರಿ

ನಿಮ್ಮಜ್ಜಿ ನಗುತವುಳೆಣ ದೂರೀ ದೂರಿ

ನಗು ತುಂಬಿ ನಗುತವಳೆಣ ದೂರೀ ದೂರಿ

ದೂರೀ ದೂರಿಣ ದೂರಿ ದೂರೀ

ದೂರಮ್ಮ ದೂರಿಣ ದೂರೀ ದೂರಿ

ದೂರು ಬಂದರೆಣ ಬರಲಿ ದೂರೀ ದೂರಿ

ದೂರು ನೂರೇ ಇರಲಿಣ ದೂರೀ ದೂರಿ

ನೀ ನಿದ್ದೆಯ ಮಾಡವ್ವಣ ದೂರೀ ದೂರಿ

- ದೇವನೂರ ಮಹಾದೇವ

(`ಹೆಮ್ಮರದಲ್ಲಿ ಹಕ್ಕಿಗೂಡು~ವಿಶೇಷ ಸಂಚಿಕೆಯಿಂದ ಆಯ್ದ ಲಾಲಿ ಪದ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry