ಒಂದೆರಡು ಹೆಜ್ಜೆ ನಡೆದ ಬಚ್ಚನ್

7

ಒಂದೆರಡು ಹೆಜ್ಜೆ ನಡೆದ ಬಚ್ಚನ್

Published:
Updated:
ಒಂದೆರಡು ಹೆಜ್ಜೆ ನಡೆದ ಬಚ್ಚನ್

 

ನವದೆಹಲಿ, (ಐಎಎನ್ಎಸ್): ರಕ್ತ ಪರೀಕ್ಷೆಯ ವರದಿಗಳು ನಟ ಅಮಿತಾಭ್ ಬಚ್ಚನ್ ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆಯಾಗಿರುವುದನ್ನು ತೋರಿಸುತ್ತಿದ್ದು, ಈಗ ಮತ್ತೊಮ್ಮೆ ಅವರು ಶಸ್ತ್ರ ಚಿಕಿತ್ಸೆಗೆ ಒಳಗಾಗಬೇಕಿಲ್ಲ. ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದ್ದು, ಭಾನುವಾರ ಕೆಲವು ಹೆಜ್ಜೆಗಳನ್ನು ನಡೆದಿದ್ದೇನೆ ಎಂದಿರುವ  ಬಚ್ಚನ್ ಅವರು, ಎಂದು ಆಸ್ಪತ್ರೆಯಿಂದ ಬಿಡುಗಡೆ ಎಂಬುದನ್ನು ಸ್ಪಷ್ಟಪಡಿಸಿಲ್ಲ.

ವೈದ್ಯಕೀಯ ತಂಡದವರು ಮತ್ತು ಕುಟುಂಬದ ಸದಸ್ಯರು ತಮ್ಮ ದೇಹದ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಿ, ಇನ್ನೊಂದು ಶಸ್ತ್ರ ಚಿಕಿತ್ಸೆ ಮಾಡುವ ಅಗತ್ಯವಿಲ್ಲ ಎಂಬ ನಿರ್ಧಾರಕ್ಕೆ ಬಂದರೆಂದು ಬಚ್ಚನ್ ಅವರು, ತಮ್ಮ ಬ್ಲಾಗ್ ನಲ್ಲಿ ಬರೆದುಕೊಂಡಿದ್ದಾರೆ. ಭಾನುವಾರ ಹಾಸಿಗೆಯ ಸುತ್ತ  ಕೊಲಿನ ಸಹಾಯದಿಂದ ಕೆಲವು ಹೆಜ್ಜೆಗಳನ್ನಿರಿಸಿದೆ ಎಂದು ಹೇಳಿಕೊಂಡಿದ್ದಾರೆ.

ಅರವತ್ತೊಂಬತ್ತು ವಯುಸ್ಸಿನ ಅಮಿತಾಭ್ ಬಚ್ಚನ್  ಇಲ್ಲಿನ ಸೆವೆನ್ ಹಿಲ್ಸ್ ಆಸ್ಪತ್ರೆಯಲ್ಲಿ  ಫೆ 11 ರಂದು ಹೊಟ್ಟೆಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಅವರನ್ನು ಫೆ 13 ರಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಬೇಕಿತ್ತು. ಆರೋಗ್ಯ ಸ್ಥಿತಿಯಲ್ಲಿ ಏರುಪೇರು ಉಂಟಾದ ಕಾರಣ ವೈದ್ಯರು ಅವರನ್ನು ತೀವ್ರ ನಿಗಾದಲ್ಲಿ ನೋಡಿಕೊಳ್ಳುತ್ತಿದ್ದಾರೆ.

ಬಚ್ಚನ್ ಇನ್ನೂ ಹಲವಾರು ದಿನಗಳ ಕಾಲ ಆಸ್ಪತ್ರೆಯಲ್ಲಿ ಇರಬೇಕಾಗುತ್ತದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry