ಒಂದೆಲಗದ ಸವಿ ರುಚಿ...

7

ಒಂದೆಲಗದ ಸವಿ ರುಚಿ...

Published:
Updated:

ಒಂದೆಲಗದ ಪಾನಕ

ಬೇಕಾಗುವ ವಸ್ತುಗಳು: ಸಣ್ಣಗೆ ಕತ್ತರಿಸಿದ ಒಂದೆಲಗದ ಸೊಪ್ಪು 1 ಕಪ್, 1 ಕಪ್ ನೀರು, ಚಿಟಿಕೆ ಉಪ್ಪು ಸಿಹಿಯಾಗುವಂತೆ ಬೆಲ್ಲ.

ಮಾಡುವ ವಿಧಾನ: ಒಂದೆಲಗದ ಸೊಪ್ಪನ್ನು ಬೇರು ಸಹಿತ ಕಿತ್ತು ತಂದು ಚೆನ್ನಾಗಿ ತೊಳೆದು, ಸಣ್ಣಗೆ ಹೆಚ್ಚಿ ಮಿಕ್ಸಿಯಲ್ಲಿ ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿ ರಸ ತೆಗೆದಿರಿಸಿಕೊಳ್ಳಿ. ಈ ರಸಕ್ಕೆ ನೀರು ಬೆರೆಸಿ, ಉಪ್ಪು, ಬೆಲ್ಲ ಸೇರಿಸಿ ಚೆನ್ನಾಗಿ ಕದಡಿ ಕುಡಿಯಿರಿ. ಇದು ಆರೋಗ್ಯಕ್ಕೆ ಒಳ್ಳೆಯದು.ಒಂದೆಲಗದ ತಂಬುಳಿ

ಬೇಕಾಗುವ ವಸ್ತುಗಳು: ಸಣ್ಣಗೆ ಕತ್ತರಿಸಿದ ಒಂದೆಲಗದ ಸೊಪ್ಪು 1 ಕಪ್, 2 ಕಪ್ ನೀರು, ಅರ್ಧ ಕಪ್ ಕಾಯಿ ತುರಿ, ಕಾಲು ಚಮಚ ಜೀರಿಗೆ, ರುಚಿಗೆ ತಕ್ಕಷ್ಟು ಉಪ್ಪು, ಒಗ್ಗರಣೆಗೆ ಎಣ್ಣೆ, ಜೀರಿಗೆ, 1 ಕಪ್ ಕಡೆದ ಮಜ್ಜಿಗೆ.ಮಾಡುವ ವಿಧಾನ: ಒಂದೆಲಗದ ಸೊಪ್ಪನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿ ರಸ ತೆಗೆದಿರಿಸಿಕೊಳ್ಳಿ. ಕಾಯಿತುರಿ ಮತ್ತು ಜೀರಿಗೆಯನ್ನು ಮಿಕ್ಸಿಯಲ್ಲಿ ಪ್ರತ್ಯೇಕ ರುಬ್ಬಿ ಒಂದೆಲಗದ ರಸಕ್ಕೆ ಬೆರೆಸಿ, ನೀರು, ಉಪ್ಪು, ಬೆಲ್ಲ, ಕಡೆದ ಮಜ್ಜಿಗೆ ಸೇರಿಸಿ, ನಂತರ ಎಣ್ಣೆ, ಜೀರಿಗೆ ಒಗ್ಗರಣೆ ಕೊಡಿ. ಬಿಸಿಯಾದ ಅನ್ನಕ್ಕೆ ಈ ತಂಬುಳಿಯನ್ನು ಕಲಸಿ ಊಟ ಮಾಡಿರಿ.ಒಂದೆಲಗದ ಚಟ್ನಿ


ಬೇಕಾಗುವ ವಸ್ತುಗಳು: ಒಂದೆಲಗದ ಸೊಪ್ಪು 4 ಕಪ್, ಅರ್ಧ ಕಪ್ ಕಾಯಿತುರಿ, 2 ಹಸಿಮೆಣಸು, ಚೂರು ಹುಣಿಸೆಹಣ್ಣು, ರುಚಿಗೆ ಉಪ್ಪು.

ಮಾಡುವ ವಿಧಾನ: ಮಿಕ್ಸಿ ಅಥವಾ ಒರಳಿನಲ್ಲಿ ಮೇಲೆ ಹೇಳಿದ ಎಲ್ಲವನ್ನೂ ಹಾಕಿ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿ. ಕೊನೆಯಲ್ಲಿ ಇಂಗಿನ ಒಗ್ಗರಣೆ ಕೊಡಿ. ಈ ಚಟ್ನಿಯನ್ನು ಅನ್ನಕ್ಕೆ ಸೇರಿಸಿ ಊಟ ಮಾಡಿರಿ. ದೋಸೆ - ಚಪಾತಿಗಳಿಗೂ ಹಚ್ಚಿ ತಿನ್ನಬಹುದು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry