ಗುರುವಾರ , ಜೂನ್ 24, 2021
29 °C

ಒಂದೇ ಊರಲ್ಲಿ, ಎರಡು ಪುರಾಣ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನಕಗಿರಿ: ಮಾನಸಿಕ ಶಾಂತಿ, ನೆಮ್ಮದಿ ಜೀವನಕ್ಕೆ ಪುರಾಣ ಪ್ರವಚನಗಳು ಅವಶ್ಯಕ, ಗ್ರಾಮದ ವಿವಿಧ ಜಾತಿ, ಧರ್ಮ, ಮತ, ಜನಾಂಗದ ಮಧ್ಯೆ ಭಾವೈಕ್ಯತೆ, ಸೌಹಾರ್ದತೆ ಮೂಡಿಸಲು ಪುರಾಣ ಪ್ರವಚನಗಳು ಅವಶ್ಯಕ.ಗ್ರಾಮದ ಎಲ್ಲಾ ಜನರು ಸೇರಿಕೊಂಡು ಹಣ, ಕಾಳು-ಕಡಿಗಳನ್ನು ಸಂಗ್ರಹ ಮಾಡಿ ಪುರಾಣ ಕಾರ್ಯಕ್ರಮಗಳನ್ನು ಆಯೋಜಿಸಿ ಕೊನೆಯ ದಿನದಲ್ಲಿ ಸಾಮೂಹಿಕ ವಿವಾಹ, ಅನ್ನಸಂತರ್ಪಣೆ ಮಾಡುವುದು ಗ್ರಾಮೀಣ ಪ್ರದೇಶದಲ್ಲಿ ಶ್ರಾವಣ, ದಸರಾ ಇತರೆ ಹಬ್ಬದ ದಿನದಲ್ಲಿ ಹೆಚ್ಚಾಗಿ ಕಂಡು ಬರುತ್ತವೆ. ನಾಯಕ, ಗಾಣಿಗ ಜನಾಂಗದವರೆ ಹೆಚ್ಚಾಗಿರುವ ಸಮೀಪದ ಸೋಮಸಾಗರ ಗ್ರಾಮದಲ್ಲಿ ಗ್ರಾಮಸ್ಥರೆಲ್ಲರೂ ಸೇರಿ `ಶ್ರೀ ಶರಣಬಸವೇಶ್ವರರ~ ಪುರಾಣ ಸಮಿತಿ ಹೆಸರಿನಲ್ಲಿ ಪುರಾಣ ಪ್ರವಚನ ಕಾರ್ಯಕ್ರಮವನ್ನು ಕಳೆದ 30 ವರ್ಷಗಳಿಂದಲೂ ಒಗ್ಗಟ್ಟಿನಿಂದ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದರು.30 ವರ್ಷ ಈ ಕಾರ್ಯಕ್ರಮ ಯಾವುದೇ ಅಡೆತಡೆ ಇಲ್ಲದೆ ನಡೆಯಿತು, ಕಳೆದ ಎಂಟು ವರ್ಷಗಳ ಹಿಂದೆ ಗ್ರಾಮಕ್ಕೆ ಕಾಲಿಟ್ಟ ವ್ಯಕ್ತಿಯೊಬ್ಬರು ಪುರಾಣ ಕಾರ್ಯಕ್ರಮದಲ್ಲಿ ~ಕೈ~ ಹಾಕಿ ಗೊಂದಲ ನಿರ್ಮಿಸಿದ ಪರಿಣಾಮ ಅಲ್ಲಿಂದ ಇಲ್ಲಿ ತನಕ ಗ್ರಾಮದಲ್ಲಿ ಶರಣಬಸವೇಶ್ವರ ಪುರಾಣ ಸಮಿತಿ ಹೆಸರಿನಲ್ಲಿ ಎರಡು ಪುರಾಣ ಕಾರ್ಯಕ್ರಮಗಳು ನಡೆಯುತ್ತಲಿವೆ ಎಂದು ಜನತೆ ತಿಳಿಸುತ್ತಾರೆ.ಎರಡೂ ಶರಣಬಸವೇಶ್ವರ ಪುರಾಣ ಸಮಿತಿಗಳು ಎರಡು ಬಣಗಳ ಹಿಡಿತದಲ್ಲಿದ್ದು ಒಂದು ಕೋಮಿನ ಜನರು ಹುಲಿಗೆಮ್ಮ ದೇವಸ್ಥಾನದಲ್ಲಿ, ಮತ್ತೊಂದು ಕೋಮಿನವರು ನಂದಿ ಬಸವೇಶ್ವರ ದೇವಸ್ಥಾನದಲ್ಲಿ ನಡೆಸಿಕೊಂಡು ಬರುತ್ತಿದ್ದಾರೆ.ಎರಡು ಸಮಿತಿಗಳು ಪುರಾಣ ಮಂಗಲದ ನಿಮಿತ್ತ ಸಾಮೂಹಿಕ ವಿವಾಹ, ಅನ್ನಸಂತರ್ಪಣೆ ನಡೆಸುತ್ತವೆ,

ಪುರಾಣ ಮಂಗಲ ಕಾರ್ಯಕ್ರಮಕ್ಕೆ ಎರಡು ಸಮಿತಿಗಳು ವಿವಿಧ ಮಠದ ಸ್ವಾಮೀಜಿಗಳನ್ನು ಆಹ್ವಾನಿಸುತ್ತಾರೆ,

ಕಳೆದ ಮೂರು ವರ್ಷಗಳ ಹಿಂದೆ ಶರಣಬಸವೇಶ್ವರ ಸಮುದಾಯ ಭವನದ ಭೂಮಿ ಪೂಜೆಗೆ ಆಗಮಿಸಿದ್ದ ಯಲಬುರ್ಗಾದ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿಯವರು ಗ್ರಾಮದಲ್ಲಿ ಗ್ರಾಮಸ್ಥರು ಒಂದಾಗಿ ಒಂದೇ ಪುರಾಣ ಸಮಿತಿ ಹೆಸರಿನಲ್ಲಿ ಕಾರ್ಯಕ್ರಮ ಆಯೋಜಿಸಬೇಕೆಂದು ನೀಡಿದ ಸಲಹೆಯನ್ನು ಗ್ರಾಮಸ್ಥರು ತಿರಸ್ಕಾರ ಮಾಡಿದ್ದಾರೆ ಹೀಗಾಗಿ ಕೆಲ ಸ್ವಾಮೀಜಿಗಳು ಎರಡು ಪುರಾಣದ ವ್ಯವಸ್ಥೆ ಕಂಡು ಕಾರ್ಯಕ್ರಮದಿಂದ ದೂರ ಉಳಿದ ಉದಾಹರಣೆಗಳಿವೆ ಎಂದು ಗ್ರಾಮಸ್ಥರು ಮಾಹಿತಿ ನೀಡುತ್ತಾರೆ.  ಎರಡು ಬಣಗಳ ಮಧ್ಯೆದ ಜಿದ್ದಾಜಿದ್ದಿ, ವೈಯಕ್ತಿಕ ಹಿತಾಸಕ್ತಿಗೆ ಗ್ರಾಮದಲ್ಲಿರುವ ಆರೋಗ್ಯಕರ ವಾತಾವರಣ ಹದಗೆಡುವುದು ಬೇಡ ಎಂಬ ಸಲಹೆಯನ್ನು ನೀಡಿದರೂ ಉಪಯೋಗವಾಗಿಲ್ಲ ಎಂದು ಜನತೆ ನಿರಾಶೆಯಿಂದ ಹೇಳುತ್ತಾರೆ. 38 ವರ್ಷಗಳಿಂದಲೂ ನಡೆಸಿಕೊಂಡು ಬರುತ್ತಿರುವ ಪುರಾಣ  ಮಹಾಮಂಗಲ ಕಾರ್ಯಕ್ರಮ ಮಾರ್ಚ್ 13 ನಡೆದರೆ, ಗಾಣಿಗ ಸಮಾಜದ ಪುರಾಣ ಕಾರ್ಯಕ್ರಮ ಮಾರ್ಚ್ 10ಕ್ಕೆ ಮಂಗಲಗೊಳ್ಳುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.