ಒಂದೇ ಕಡೆ ಹತ್ತು ಕಲಾವಿದರ ಕೈಚಳಕ

7

ಒಂದೇ ಕಡೆ ಹತ್ತು ಕಲಾವಿದರ ಕೈಚಳಕ

Published:
Updated:

ಖ್ಯಾತ ಕಲಾವಿದರಾದ ಸಬ್ರಿನಾ ಆಸ್‌ಬಾರ್ನೆ, ಮೌಟುಷಿ ಚಕ್ರವರ್ತಿ, ವೇಣುಗೋಪಾಲ್‌ ವಿ.ಜಿ, ರವಿಕುಮಾರ್‌ ಕಾಶಿ, ಮೋಹನ್‌ ಕುಮಾರ್‌ ಟಿ, ಅನೋಲಿ ಪೆರೆರಾ, ಕ್ಲಾರಾ ಅರ್ನಿ, ಪ್ರೀತಿ ವದಕ್ಕಥ್‌, ಸಮಂತಾ ಬಾತ್ರಾ ಮೆಹ್ತಾ ಅವರ ಅಪರೂಪದ ಕಲಾಕೃತಿಗಳ ಪ್ರದರ್ಶನ ಗ್ಯಾಲರಿ ಸುಮುಖದಲ್ಲಿ ಶನಿವಾರ ಆರಂಭವಾಗಲಿದೆ. ಪ್ರದರ್ಶನದ ಹೆಸರು ‘ಮೆಮೊರಬಲಿಯಾ’.ನೆನಪು ಮತ್ತು ಛಾಯಾಚಿತ್ರಗಳ ನಡುವೆ ಅವಿನಾಭಾವ ಸಂಬಂಧ ಇದೆ. ಎಲ್ಲ ಬಗೆಯ ನೆನಪುಗಳಿಗೆ ಸಾಕ್ಷಿಯಾಗಿ ನಿಲ್ಲುವ ಛಾಯಾಚಿತ್ರಗಳು ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿವೆ. ಸೆರೆಸಿಕ್ಕ ಖುಷಿಯ ನೆನಪುಗಳನ್ನು ನೋಡಿ ಜೀಕುತ್ತಾ ಭಾವಪರವಶರನ್ನಾಗಿಸುವಂತಹ ಛಾಯಾಚಿತ್ರಗಳು ಇಲ್ಲಿವೆ. ಪ್ರದರ್ಶನ ಉದ್ಘಾಟನೆ ಇಂದು ಸಂಜೆ 6.30 ನೆರವೇರಲಿದ್ದು, ಈ ವೇಳೆ ಎಲ್ಲ ಕಲಾವಿದರು ಉಪಸ್ಥಿತರಿರುತ್ತಾರೆ. ಜನವರಿ 25ರವರೆಗೆ ಕಲಾಕೃತಿಗಳು ವೀಕ್ಷಣೆಗೆ ಲಭ್ಯ.ಸ್ಥಳ: ಗ್ಯಾಲರಿ ಸುಮುಖ, 24/10 ಬಿಟಿಎಸ್‌ ಡಿಪೊ ರಸ್ತೆ, ವಿಲ್ಸನ್‌ ಗಾರ್ಡನ್‌. ಮಾಹಿತಿಗೆ: 2229 2230.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry