ಒಂದೇ ಕುಟುಂಬದ ಐವರಿಗೆ ಗಲ್ಲು ಶಿಕ್ಷೆ

7

ಒಂದೇ ಕುಟುಂಬದ ಐವರಿಗೆ ಗಲ್ಲು ಶಿಕ್ಷೆ

Published:
Updated:

ನವದೆಹಲಿ (ಪಿಟಿಐ):  ಹದಿಹರೆಯದ ಪ್ರೇಮಿಗಳನ್ನು ಕ್ರೂರವಾಗಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿ ಒಂದೇ ಕುಟುಂಬದ ಐವರಿಗೆ ದೆಹಲಿ ನ್ಯಾಯಾಲಯ ಗಲ್ಲುಶಿಕ್ಷೆ ವಿಧಿಸಿದೆ.ಕುಟುಂಬದ ಇಚ್ಛೆಗೆ ವಿರುದ್ಧವಾಗಿ ಪರಿಶಿಷ್ಟ ಜಾತಿಗೆ ಸೇರಿದ ಯುವಕನನ್ನು ವಿವಾಹವಾಗಲು ನಿರ್ಧರಿಸಿದ ತಮ್ಮ ಪುತ್ರಿ ಹಾಗೂ ಆಕೆಯ ಪ್ರಿಯಕರನನ್ನು ಐವರು ನಿರ್ದಯರಾಗಿ ಚಿತ್ರಹಿಂಸೆ ನೀಡಿದ್ದಲ್ಲದೆ, ವಿದ್ಯುತ್ ಹರಿಸಿ ಕ್ರೂರವಾಗಿ ಕೊಲೆಗೈದ ಈ ಪ್ರಕರಣ ಅಪರೂಪದಲ್ಲೇ ಅಪರೂಪವಾಗಿದ್ದು, ಕುಟುಂಬದ ಸದಸ್ಯರು ನಡೆಸಿದ ಹತ್ಯೆಯ ಘೋರ ರೂಪ ನ್ಯಾಯಾಲಯದ ಆತ್ಮಸಾಕ್ಷಿಯನ್ನೇ ಅಲುಗಾಡಿಸಿದೆ~ ಎಂದು ಶಿಕ್ಷೆಯ ತೀರ್ಪನ್ನು ಪ್ರಕಟಿಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ರಮೇಶ್ ಕುಮಾರ್ ಸಿಂಘಾಲ್ ಹೇಳಿದರು.ಪರಸ್ಪರ ಪ್ರೀತಿಸುತ್ತಿದ್ದ ಯೋಗೇಶ್ (20) ಮತ್ತು ಆಶಾ (19) ಅವರನ್ನು ಆಶಾಳ ಹೆತ್ತವರು ಹಾಗೂ ಸಂಬಂಧಿಕರು ಜೊತೆಯಾಗಿ ಸೇರಿಕೊಂಡು 2010ರ ಜೂನ್ ತಿಂಗಳಲ್ಲಿ ಹತ್ಯೆಗೈದಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry