ಒಂದೇ ಕುಟುಂಬದ ಮೂವರ ಆತ್ಮಹತ್ಯೆ

7

ಒಂದೇ ಕುಟುಂಬದ ಮೂವರ ಆತ್ಮಹತ್ಯೆ

Published:
Updated:

ಮಾಲೂರು: ತಾಲ್ಲೂಕಿನ ಕೆ.ಜಿ.ಹಳ್ಳಿ ಗ್ರಾಮದಲ್ಲಿ ಸಾಲದ ಬಾಧೆಯಿಂದ ಒಂದೇ ಕುಟುಂಬದ ಮೂವರು  ಸೈನೈಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಸಂಜೆ ನಡೆದಿದೆ.ಮೃತಪಟ್ಟವರನ್ನು ಕೆ.ಜಿ.ಹಳ್ಳಿ ಗ್ರಾಮದ ಚಿನ್ನದ ಒಡವೆ ತಯಾರಿಸುವ ಮಾರ್ಕಂಡಾಚಾರಿ (45), ಪತ್ನಿ ಮಂಜುಳಾ (30), ಪುತ್ರಿ ಕುಸುಮಾ (16) ಎಂದು ಗುರುತಿಸಲಾಗಿದೆ.ವಿವರ: ತಾಲ್ಲೂಕಿನ ಕೆ.ಜಿ.ಹಳ್ಳಿ ಗ್ರಾಮದಲ್ಲಿ ಮಾರ್ಕಂಡಾಚಾರಿ ಚಿನ್ನದ ಒಡವೆ ಅಂಗಡಿ ನಡೆಸುತ್ತಿದ್ದರು. ಈಚೆಗೆ ಅವರಿಗೆ ಸಾಲದ ಹೊರೆ ಹೆಚ್ಚಾಗಿತ್ತು. ಮನೆಯಲ್ಲಿದ್ದ ಮಗ ಜಗದೀಶ್‌ನನ್ನು ಕೆಲಸದ ಮೇಲೆ ಹೊರಗೆ ಕಳುಹಿಸಿ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry