ಒಂದೇ ಗೂಡಿನಲ್ಲಿ ಜಗದೀಶ್-ಕೃಷ್ಣಯ್ಯ

7

ಒಂದೇ ಗೂಡಿನಲ್ಲಿ ಜಗದೀಶ್-ಕೃಷ್ಣಯ್ಯ

Published:
Updated:

ಬೆಂಗಳೂರು: ನ್ಯಾಯಾಂಗ ಬಂಧನದಲ್ಲಿರುವ ಶಾಸಕ ಎಸ್.ಎನ್.ಕೃಷ್ಣಯ್ಯ ಶೆಟ್ಟಿ ಅವರ ಆರೋಗ್ಯ ಸ್ಥಿತಿ ಸುಧಾರಿಸಿದ್ದು, ಅವರನ್ನು ಕೆಐಎಡಿಬಿ ಭೂ ಹಗ ರಣದಲ್ಲಿ ಬಂಧಿತರಾಗಿರುವ ಬಿಬಿಎಂಪಿ ಸದಸ್ಯ ಕಟ್ಟಾ ಜಗದೀಶ್ ಕೊಠಡಿಗೆ ಸ್ಥಳಾಂತರಿಸಲಾಗಿದೆ.ಶನಿವಾರ ಇಡೀ ರಾತ್ರಿ ಕೃಷ್ಣಯ್ಯ ಶೆಟ್ಟಿ ಅವರನ್ನು ಪ್ರತ್ಯೇಕ ಕೊಠಡಿಯಲ್ಲಿ ಇರಿಸಲಾಗಿತ್ತು. ಆದರೆ, ಒಬ್ಬಂಟಿಯಾಗಿರಲು ಸಾಧ್ಯವಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕಾರಾಗೃಹ ಅಧಿ ಕಾರಿಗಳು ಭಾನುವಾರ ಬೆಳಿಗ್ಗೆ ಅವರನ್ನು ಕಟ್ಟಾ ಜಗ ದೀಶ್ ಮತ್ತು ಇಟಾಸ್ಕಾ ಕಂಪೆನಿ ವ್ಯವಸ್ಥಾಪಕ ನಿರ್ದೇ ಶಕ ಎಸ್.ವಿ.ಶ್ರೀನಿವಾಸ್ ಇರುವ ಕೊಠಡಿಗೆ ಸ್ಥಳಾಂ ತರಿಸಿದ್ದಾರೆ.ಈಗ ಈ ಮೂವರೂ ಒಂದೇ ಕೊಠಡಿ ಯಲ್ಲಿದ್ದಾರೆ.ಲೋಕಾಯುಕ್ತ ವಿಶೇಷ ನ್ಯಾಯಾಲಯವು ಕೃಷ್ಣಯ್ಯ ಶೆಟ್ಟಿ ಅವರನ್ನು ಶನಿವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿದ್ದ ಸಂದರ್ಭದಲ್ಲಿ ಅವರು ಅಸ್ವಸ್ಥರಾಗಿ ನ್ಯಾಯಾಲಯದಲ್ಲೇ ಕುಸಿದು ಬಿದ್ದಿದ್ದರು. ಆ ನಂತರ ಅವರನ್ನು ಅಂಬುಲೆನ್ಸ್‌ನಲ್ಲೇ ಕಾರಾಗೃಹಕ್ಕೆ ಕರೆತರಲಾಗಿತ್ತು.`ಕೃಷ್ಣಯ್ಯ ಶೆಟ್ಟಿ ಅವರಿಗೆ ಕಾರಾಗೃಹ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ನಂತರ ಅವರನ್ನು ಜೈಲಿನ ವಿಶೇಷ ಭದ್ರತಾ ವಿಭಾಗದ (ಸ್ಪೆಷಲ್ ಸೆಕ್ಯುರಿಟಿ ಬ್ಲಾಕ್) ಐದನೇ ಕೊಠಡಿಯಲ್ಲಿ ಇರಿಸಲಾಗಿತ್ತು. ಯಡಿಯೂರಪ್ಪ ಅವರನ್ನು ಅದೇ ಕೊಠಡಿಗೆ ಸ್ಥಳಾಂತರಿಸಲು ನಿರ್ಧರಿಸಲಾಗಿತ್ತು.ಆದರೆ ಅವರು ಅನಾರೋಗ್ಯದಿಂದ ಅಸ್ವಸ್ಥಗೊಂಡಿದ್ದರಿಂದ ಅವರನ್ನು ಜೈಲಿನ ಆಸ್ಪತ್ರೆಯಿಂದ ಜಯದೇವ ಆಸ್ಪತ್ರೆಗೆ ಕರೆದೊಯ್ಯಲಾಯಿತು~ ಎಂದು ಕಾರಾಗೃಹ ಅಧಿಕಾರಿಗಳು `ಪ್ರಜಾವಾಣಿ~ ಗೆ ತಿಳಿಸಿದರು.`ಕೃಷ್ಣಯ್ಯ ಶೆಟ್ಟಿ ಶನಿವಾರ ರಾತ್ರಿ ಕೊಠಡಿಯಲ್ಲಿ ಒಬ್ಬರೇ ಇದ್ದರು. ಭಾನುವಾರ ಬೆಳಗಿನ ಜಾವ ಬೇಗನೆ ಎಚ್ಚರಗೊಂಡ ಅವರು ಕೊಠಡಿಯಲ್ಲಿ ಒಬ್ಬಂಟಿಯಾಗಿರಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಆದಕಾರಣ ಅವರನ್ನು ಜೈಲಿನ ವಿಶೇಷ ಭದ್ರತಾ ವಿಭಾಗದ ನಾಲ್ಕನೇ ಕೊಠಡಿಯಲ್ಲಿರುವ ಕಟ್ಟಾ ಜಗದೀಶ್ ಮತ್ತು ಇಟಾಸ್ಕಾ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ್ ಅವರ ಕೊಠಡಿಗೆ ಸ್ಥಳಾಂತರಿಸಲಾಯಿತು~ ಎಂದು ಅಧಿಕಾರಿಗಳು ಹೇಳಿದ್ದಾರೆ.`ಕೆಲವು ದೇವರ ಪಟಗಳನ್ನು ಅವರಿಗೆ ನೀಡಲಾಗಿದ್ದು, ದೇವರ ಪೂಜೆಗೆ ಕೊಠಡಿಯಲ್ಲೇ ಅವಕಾಶ ಕಲ್ಪಿಸಲಾಗಿದೆ. ಮುಂಜಾನೆ ಬೇಗನೆ ಎದ್ದ ಅವರು ಸ್ನಾನ ಮಾಡಿ ಕೊಠಡಿಯಲ್ಲೇ ಸ್ವಲ್ಪ ಸಮಯ ದೇವರ ಪೂಜೆ ಮಾಡಿದರು.~ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.`ಮನೆಯಿಂದಲೇ ತರಿಸಿಕೊಂಡ ಆಹಾರ ಸೇವಿಸಿದರು. ಬಳಿಕ ಜೈಲಿನ ಗ್ರಂಥಾಲಯದಿಂದ ಅಧ್ಯಾತ್ಮಕ್ಕೆ ಸಂಬಂಧಿಸಿದ ಪುಸ್ತಕ ಹಾಗೂ ಪತ್ರಿಕೆಗಳನ್ನು ಕೊಠಡಿಗೆ ತರಿಸಿಕೊಂಡು ಓದಿದರು~ ಅವರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry