ಒಂದೇ ತಿಂಗಳಲ್ಲಿ 200 ಆನೆ ಹತ್ಯೆ!

7

ಒಂದೇ ತಿಂಗಳಲ್ಲಿ 200 ಆನೆ ಹತ್ಯೆ!

Published:
Updated:

ಕೇಪ್‌ಟೌನ್ (ಐಎಎನ್‌ಎಸ್): ಆಫ್ರಿಕಾ ಖಂಡದ ಕ್ಯಾಮರೂನ್‌ನಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ ಬೇಟೆಗಾರರು 200 ಆನೆಗಳನ್ನು ಹತ್ಯೆ ಮಾಡಿದ್ದಾರೆ ಎಂದು ಅಧ್ಯಯನವೊಂದು ತಿಳಿಸಿದೆ.ಸುಡಾನ್‌ನ ಬೇಟೆಗಾರರ ತಂಡ ಮಧ್ಯ ಆಫ್ರಿಕಾದ ಚಾಡ್ ಗಡಿಯ ಉತ್ತರ ಕ್ಯಾಮರೂನ್‌ನಲ್ಲಿರುವ ರಾಷ್ಟ್ರೀಯ ಉದ್ಯಾನವೊಂದರ ವ್ಯಾಪ್ತಿಯಲ್ಲಿ ಜೂನ್ 15ರಿಂದ ಈಚೆಗೆ ಇಷ್ಟು ಆನೆಗಳನ್ನು ಹತ್ಯೆ ಮಾಡಿದೆ ಎಂದು ಸರ್ಕಾರೇತರ ಸಂಸ್ಥೆಯಾದ ಅಂತರರಾಷ್ಟ್ರೀಯ ಪ್ರಾಣಿ ನಿಧಿ (ಐಎಫ್‌ಎಡಬ್ಲ್ಯೂ) ಸಂಸ್ಥೆಯು ಅಂಕಿಅಂಶ ಬಿಡುಗಡೆ ಮಾಡಿದೆ.ಏಷ್ಯಾ, ಯುರೋಪ್ ಖಂಡದ ಪಶ್ಚಿಮ ಭಾಗ ಮತ್ತು ಮಧ್ಯ ಆಫ್ರಿಕಾದ ಮಾರುಕಟ್ಟೆಗಳಿಗೆ ಆನೆ ದಂತಗಳನ್ನು ಕಳ್ಳ ಸಾಗಣೆ ಮಾಡಲಾಗಿದ್ದು, ಈಗ ಇಲ್ಲಿ ನಡೆದಿರುವ ಪ್ರಾದೇಶಿಕ ದಂಗೆಗೆ ಶಸ್ತ್ರಾಸ್ತ್ರ ಪೂರೈಸಲು ದಂತದಿಂದ ಬರುವ ಹಣ ಬಳಸಲಾಗುತ್ತಿದೆ ಎಂದು ಸಂಸ್ಥೆಯ ಸಿಸ್ಲರ್ ಬೇನ್‌ವೆನು ಹೇಳಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry