ಮಂಗಳವಾರ, ಮೇ 11, 2021
21 °C

ಒಂದೇ ಮಳೆಗೆ ಹಾಳಾಯ್ತು ಶಾಖಾಪುರ ಸೇತುವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಷ್ಟಗಿ: ತಾಲ್ಲೂಕಿನ ಶಾಖಾಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಗೆ ಅಡ್ಡಲಾಗಿ ಇತ್ತೀಚೆಗಷ್ಟೆ ನಿರ್ಮಿಸಿದ್ದ ಸೇತುವೆ ಮೊದಲ ಮಳೆಗೇ ಕಿತ್ತು ಹೋಗಿದೆ.ಅಗತ್ಯವಿಲ್ಲದಿದ್ದರೂ ಈಗಾಗಲೇ ಒಂದು ಸೇತುವೆ ಇದ್ದರೂ ಅದರ ಪಕ್ಕದಲ್ಲಿ ಅವೈಜ್ಞಾನಿಕವಾಗಿ ಈ ಸೇತುವೆ ನಿರ್ಮಾಗೊಂಡಿದ್ದು, ಕಾಮಗಾರಿ ತೀರಾ ಕಳಪೆಯಾಗಿತ್ತು. ಆರಂಭದಲ್ಲಿಯೇ ಅದರ ಬಗ್ಗೆ ಮೌಖಿಕ ದೂರು ನೀಡಿದ್ದೆವು, ಆದರೂ ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಗಮನಹರಿಸಲಿಲ್ಲ.  ಒಂದೇ ಮಳೆಗೆ ಸೇತುವೆ ಕಿತ್ತು ಹಳ್ಳಕ್ಕೆ ಹೋಗುವಂತಾಯಿತು ಎಂದು ಈ ಮಾರ್ಗದಲ್ಲಿ ಸಂಚರಿಸುವ ಜನರು ಆರೋಪಿಸಿದ್ದಾರೆ.ಲೋಕೋಪಯೋಗಿ ಇಲಾಖೆ ಈ ರಸ್ತೆ ಸೇತುವೆ ಕಾಮಗಾರಿಗೆ ರೂ. 1.5 ಲಕ್ಷ ಖರ್ಚು ಮಾಡಲಾಗಿತ್ತು, ಒಂದೇ ಸ್ಥಳದಲ್ಲಿ ಎರಡು ಸೇತುವೆ ನಿರ್ಮಿಸುವ ಅಗತ್ಯವೇ ಇಲ್ಲ ಎಂದರೂ ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳದೇ ಕಾಟಾಚಾರಕ್ಕೆ ಸೇತುವೆ ನಿರ್ಮಿಸಲಾಯಿತು ಎಂದು ಹನಮಗೌಡ ಶಾಖಾಪುರ, ಫಕೀರಪ್ಪ ದೂರಿದರು.ಎಂಜಿನಿಯರರ ಅವೈಜ್ಞಾನಿಕ ನಿರ್ಧಾರದಿಂದ ಡಾಂಬರ್ ರಸ್ತೆ, ಸೇತುವೆ ಹಾಳಾಗಿದೆ. ಇನ್ನೊಂದು ಮಳೆ ಬಂದರೆ ರಸ್ತೆಯೇ ಕೊಚ್ಚಿಹೋಗುತ್ತದೆ. ಆಗ ಮತ್ತೆ ನಾವು ತೊಂದರೆ ಅನುಭವಿಸುವಂತಾಗುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು. ಎಂಜಿನಿಯರ್ ಭೀಮಸೇನರಾವ ವಜ್ರಬಂಡಿ, ಸೇತುವೆ ಗಟ್ಟಿಮುಟ್ಟಾಗಿ ನಿರ್ಮಿಸುವುದಾಗಿ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.