ಗುರುವಾರ , ಫೆಬ್ರವರಿ 25, 2021
27 °C

ಒಂದೇ ವೇದಿಕೆಯಲ್ಲಿ 500 ಕೀಬೋರ್ಡ್‌ ವಾದನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಒಂದೇ ವೇದಿಕೆಯಲ್ಲಿ 500 ಕೀಬೋರ್ಡ್‌ ವಾದನ

ಶ್ರೀ ವೀಣಾ ವಾಣಿ ಸಂಗೀತ ಶಾಲೆಯ 41ನೇ ವಾರ್ಷಿಕೋತ್ಸವದ ಅಂಗವಾಗಿ ಒಂದೇ ವೇದಿಕೆಯ ಮೇಲೆ ಸುಮಾರು 500 ಜನ  ಕೀಬೋರ್ಡ್ ವಾದ್ಯ ನುಡಿಸಿ ಗಿನ್ನೆಸ್ ದಾಖಲೆ ಮಾಡಲು ಹೊರಟಿದ್ದಾರೆ. ಕಳೆದ ಜನವರಿಯಿಂದ ಈ ಕಾರ್ಯಕ್ರಮಕ್ಕೆ ತಯಾರಿ ನಡೆಸುತ್ತಿದ್ದು, ರಾಜ್ಯದ ಹಲವಾರು ಭಾಗಗಳಿಂದ ಅಭ್ಯರ್ಥಿಗಳು ಭಾಗವಹಿಸಲಿದ್ದಾರೆ.ಈ ಕಾರ್ಯಕ್ರಮವು ಜೂನ್ 28ರಂದು ಜೈನ್ ವಿಶ್ವವಿದ್ಯಾಲಯದ ಜಯನಗರದ ಆವರಣದಲ್ಲಿ ಭಾನುವಾರ ಬೆಳಿಗ್ಗೆ  10 ಗಂಟೆಗೆ ನಡೆಯಲಿದೆ.  ರಾಜ್ಯದ ರಾಜ್ಯಪಾಲರು ಕೇಂದ್ರ ಮತ್ತು ರಾಜ್ಯ ಮಂತ್ರಿಗಳು ಚಲನಚಿತ್ರನಟರು, ಖ್ಯಾತ ಸಂಗೀತ ನಿರ್ದೇಶಕರು ಭಾಗವಹಿಸಲಿದ್ದಾರೆ.ಕಾರ್ಯಕ್ರಮದಲ್ಲಿ  ಇನ್ನೂ ಹಲವಾರು ನುರಿತ ಕೀ ಬೋರ್ಡ್‌ ವಾದಕರು ಇದರಲ್ಲಿ ಭಾಗವಹಿಸಬಹುದು.  ಹೆಚ್ಚಿನ ಮಾಹಿತಿಗೆ  ಬಿ.ಗಿರೀಶ್ ಕುಮಾರ್, ಎಂಎ, ಎಂಫಿಲ್, ಶ್ರೀ ವೀಣಾವಾಣಿ ಸಂಗೀತ ಶಾಲೆ (ರಿ), #1508/ಎ, 27ನೇ ಅಡ್ಡರಸ್ತೆ, 25ನೇ ಮುಖ್ಯರಸ್ತೆ, ಬನಶಂಕರಿ 2ನೇ ಹಂತ, ಬೆಂಗಳೂರು-70.  ಮೊಬೈಲ್  9886659845

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.