ಒಂಭತ್ತು ಮಂದಿ ಕಣದಲ್ಲಿ

7

ಒಂಭತ್ತು ಮಂದಿ ಕಣದಲ್ಲಿ

Published:
Updated:

ಬೆಂಗಳೂರು: ಬಿಬಿಎಂಪಿಯ ಗಾಂಧಿನಗರ ವಾರ್ಡ್‌ಗೆ ಇದೇ 26ರಂದು ನಡೆಯಲಿರುವ ಉಪ ಚುನಾವಣೆಗೆ ನಾಮಪತ್ರ ಹಿಂತೆಗೆದುಕೊಳ್ಳಲು ಕೊನೇ ದಿನವಾದ ಶನಿವಾರ ಐವರು ಪಕ್ಷೇತರರು ನಾಮಪತ್ರ ಹಿಂತೆಗೆದುಕೊಂಡಿದ್ದು, ಅಂತಿಮವಾಗಿ 9 ಮಂದಿ ಕಣದಲ್ಲಿ ಉಳಿದಿದ್ದಾರೆ.ಒಟ್ಟು 15 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಈ ಪೈಕಿ ಪಕ್ಷೇತರ ಅಭ್ಯರ್ಥಿ ಫರೂಕ್ ಪಾಶ ನಾಮಪತ್ರ ತಿರಸ್ಕೃತವಾಗಿತ್ತು.ಇನ್ನುಳಿದ 14 ಮಂದಿ ಅಭ್ಯರ್ಥಿಗಳ ಪೈಕಿ ಐವರು ಪಕ್ಷೇತರರಾದ ಕೆ. ಶಿವರಾಮಣ್ಣ, ಮಹೇಶ್ ಯಾದವ್, ಗೌಸ್ ಫಹಿಯುದ್ದೀನ್, ಗೋವಿಂದಸ್ವಾಮಿ ಹಾಗೂ ಶಂಭುಲಿಂಗೇಗೌಡ ನಾಮಪತ್ರ ಹಿಂತೆಗೆದುಕೊಂಡಿದ್ದಾರೆ.ಅಂತಿಮವಾಗಿ ಪ್ರಮುಖ ಐದು ರಾಜಕೀಯ ಪಕ್ಷಗಳಿಂದ ಅಂದರೆ, ಕಾಂಗ್ರೆಸ್‌ನಿಂದ ಟಿ. ಗೋಪಾಲಕೃಷ್ಣ, ಬಿಜೆಪಿಯಿಂದ ಜಿ. ರಾಮಚಂದ್ರ, ಜೆಡಿಎಸ್‌ನಿಂದ ಪಿ.ಕೆ. ಸುರೇಶ್, ಎಐಎಡಿಎಂಕೆಯಿಂದ ಎಂ.ಪಿ. ಯುವರಾಜ್, ಜೆಡಿಯುನಿಂದ ಎಸ್. ಅಶ್ವತ್ಥನಾರಾಯಣ ಕಣದಲ್ಲಿದ್ದಾರೆ. ಪಕ್ಷೇತರರಾಗಿ ಕೆ. ರಮೇಶ್, ಎಸ್.ಎನ್. ರಮೇಶ್, ಸಿ.ಜಿ.ಕೆ. ರಾಮು ಹಾಗೂ ಅಬ್ದುಲ್ ಗಫಾರ್ ಕಣದಲ್ಲಿ ಉಳಿದಿದ್ದಾರೆ. ಪಕ್ಷೇತರ ಅಭ್ಯರ್ಥಿಗಳಿಗೆ ಶನಿವಾರವೇ `ಚಿಹ್ನೆ~ ಹಂಚಿಕೆ ಮಾಡಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry