ಒಎನ್‌ಜಿಸಿಗೆ ತಂಡ ಪ್ರಶಸ್ತಿ

7

ಒಎನ್‌ಜಿಸಿಗೆ ತಂಡ ಪ್ರಶಸ್ತಿ

Published:
Updated:

ನವದೆಹಲಿ (ಪಿಟಿಐ): ಎಚ್‌.ಎಸ್‌. ಪ್ರಣಯ್‌ ಮತ್ತು ಸೌರಭ್‌ ವರ್ಮ ತೋರಿದ ಉತ್ತಮ ಆಟದ ನೆರವಿನಿಂದ ಒಎನ್‌ಜಿಸಿ ತಂಡ

ಇಲ್ಲಿ ನಡೆಯುತ್ತಿರುವ ಪಿಎಸ್‌ಪಿಬಿ  ಅಂತರ ಯೂನಿಟ್‌ ಬ್ಯಾಡ್ಮಿಂಟನ್‌ ಟೂರ್ನಿ­ಯಲ್ಲಿ ಪುರುಷರ ತಂಡ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡಿತು.ಮಂಗಳವಾರ ನಡೆದ ಫೈನಲ್ ಹೋರಾಟದ ಮೊದಲ ಸಿಂಗಲ್ಸ್‌ನಲ್ಲಿ ಒಎನ್‌ಜಿಸಿಯ ಪ್ರಣಯ್‌ 21–16, 11–21, 21–19ರಲ್ಲಿ ಐಒಸಿಎಲ್‌ನ ಕೆ. ಶ್ರೀಕಾಂತ್‌ ಎದುರು ಜಯ ಪಡೆದು ಆರಂಭಿಕ ಮುನ್ನಡೆ ತಂದುಕೊಟ್ಟರು. ಎರಡನೇ ಸಿಂಗಲ್ಸ್‌ನಲ್ಲಿ ಸೌರಭ್‌ ವರ್ಮಾ 21–13, 22–20ರಲ್ಲಿ ಐಒಸಿಎಲ್‌ ತಂಡವನ್ನು ಪ್ರತಿನಿಧಿಸುವ ಪಿ. ಕಶ್ಯಪ್‌ ಎದುರು ಗೆಲುವು ಸಾಧಿಸಿ ಮುನ್ನಡೆಯನ್ನು 2–0ರಲ್ಲಿ ಹೆಚ್ಚಿಸಿದರು.ಪುರುಷರ ಡಬಲ್ಸ್‌ ವಿಭಾಗದಲ್ಲಿ ರೂಪೇಶ್‌ ಕುಮಾರ್‌ ಮತ್ತು ವಿ. ದಿಜು 21–10, 22–20ರಲ್ಲಿ ಅರುಣ್‌ ವಿಷ್ಣು ಹಾಗೂ ಕೆ. ಶ್ರೀಕಾಂತ್‌ ಎದುರು ಗೆಲುವು ಸಾಧಿಸುವ ಮೂಲಕ ಒಎನ್‌ಜಿಸಿ ತಂಡಕ್ಕೆ ಪ್ರಶಸ್ತಿ ತಂದುಕೊಟ್ಟರು.ಬಿಪಿಸಿಎಲ್‌ ಚಾಂಪಿಯನ್‌: ಮಹಿಳೆಯರ ತಂಡ ವಿಭಾಗದಲ್ಲಿ ಬಿಪಿಸಿಎಲ್‌ 2–1ರಲ್ಲಿ ಐಒಸಿಎಲ್‌ ಎದುರು ಗೆಲುವು ಸಾಧಿಸಿ ಪ್ರಶಸ್ತಿ ತನ್ನದಾಗಿಸಿಕೊಂಡಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry