ಒಎನ್‌ಜಿಸಿ–ಸ್ಪೋರ್ಟಿಂಗ್‌ ನಡುವೆ ಫೈನಲ್‌

7
ಡ್ಯುರಾಂಡ್‌ ಕಪ್‌ ಫುಟ್‌ಬಾಲ್‌ ಟೂರ್ನಿ

ಒಎನ್‌ಜಿಸಿ–ಸ್ಪೋರ್ಟಿಂಗ್‌ ನಡುವೆ ಫೈನಲ್‌

Published:
Updated:
ಒಎನ್‌ಜಿಸಿ–ಸ್ಪೋರ್ಟಿಂಗ್‌ ನಡುವೆ ಫೈನಲ್‌

ನವದೆಹಲಿ (ಪಿಟಿಐ): ಒಎನ್‌ಜಿಸಿ ಹಾಗೂ ಮೊಹಮ್ಮಡನ್‌ ಸ್ಪೋರ್ಟಿಂಗ್‌ ತಂಡದವರು ಗುರುವಾರ ಇಲ್ಲಿ ನಡೆಯಲಿರುವ 126ನೇ ಡ್ಯುರಾಂಡ್‌ ಕಪ್‌ ಫುಟ್‌ಬಾಲ್‌ ಟೂರ್ನಿಯ ಫೈನಲ್‌ನಲ್ಲಿ ಪೈಪೋಟಿ ನಡೆಸಲಿದ್ದಾರೆ.ಅಂಬೇಡ್ಕರ್‌ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ಒಎನ್‌ಜಿಸಿ ತಂಡ 1–0 ಗೋಲಿನಿಂದ ಇಂಡಿಯನ್‌ ನೇವಿ ತಂಡವನ್ನು ಪರಾಭವಗೊಳಿಸಿತು.ಸ್ಟ್ರೈಕರ್‌ ಹೆನ್ರಿ ಎಜೆ 53ನೇ ನಿಮಿಷದಲ್ಲಿ ಗೋಲು ಗಳಿಸಿ ಗೆಲುವಿನ ರೂವಾರಿ ಎನಿಸಿದರು.‌‌ಈ ಪಂದ್ಯದಲ್ಲಿ ಪಾರಮ್ಯ ಮೆರೆದಿದ್ದು ಇಂಡಿಯನ್‌ ನೇವಿ. ಆದರೆ ಲಭಿಸಿದ ಅವಕಾಶಗಳನ್ನು ಗೋಲಾಗಿ ಪರಿವರ್ತಿಸುವಲ್ಲಿ ಎಡವಿದರು. ಇದೇ ಮೊದಲ ಬಾರಿ ಒಎನ್‌ಜಿಸಿ ತಂಡದವರು ಫೈನಲ್‌ ಪ್ರವೇಶಿಸಿದ್ದಾರೆ.ಸೋಮವಾರ ನಡೆದ ಮೊದಲ ಸೆಮಿಫೈನಲ್‌ನಲ್ಲಿ ಕೋಲ್ಕತ್ತ ಮೂಲದ ಮೊಹಮ್ಮಡನ್‌ ಸ್ಪೋರ್ಟಿಂಗ್‌ ತಂಡದವರು 3–1ಗೋಲುಗಳಿಂದ ಮುಂಬೈ ಟೈಗರ್ಸ್‌ ಎದುರು ಗೆಲುವು ಸಾಧಿಸಿದ್ದರು.ಫೈನಲ್‌ ಪಂದ್ಯ ಹೊನಲು ಬೆಳಕಿನಲ್ಲಿ ನಡೆಯಲಿದ್ದು ಸಂಜೆ 5.45ಕ್ಕೆ ಆರಂಭವಾಗಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry