ಒಎನ್‌ಜಿಸಿ ಶುಭಾರಂಭ

7

ಒಎನ್‌ಜಿಸಿ ಶುಭಾರಂಭ

Published:
Updated:

ಮಂಗಳೂರು: ಅಂತರರಾಷ್ಟ್ರೀಯ ಆಟಗಾರರನ್ನು ಒಳಗೊಂಡ ಡೆಹ್ರಾಡೂನಿನ ಒಎನ್‌ಜಿಸಿ ತಂಡದವರು, ಗುರುವಾರ ಆರಂಭವಾದ 5ನೇ ಅಖಿಲ ಭಾರತ ಆಹ್ವಾನ ವಾಲಿಬಾಲ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ತಿರುವನಂತಪುರದ ಕೇರಳ ರಾಜ್ಯ ವಿದ್ಯುಚ್ಛಕ್ತಿ ಮಂಡಳಿ ತಂಡವನ್ನು 3-0 ನೇರ ಸೆಟ್‌ಗಳಿಂದ ಸೋಲಿಸಿದರು.ಮಂಗಳಾ ಫ್ರೆಂಡ್ಸ್ ಸರ್ಕಲ್ ಆಶ್ರಯದಲ್ಲಿ ಶಿವಪ್ರಸಾದ್ ಬಾಳಿಗಾ ಸ್ಮರಣಾರ್ಥ ನಡೆಯುತ್ತಿರುವ ಈ ಹೊನಲು ಬೆಳಕಿನ ಟೂರ್ನಿಯ ಮೊದಲ ಪಂದ್ಯ ನಡೆದಿದ್ದು 50 ನಿಮಿಷ ಮಾತ್ರ.

 

ಕೆ.ಎಸ್.ಇ.ಬಿ. ಯಾವುದೇ ಹಂತದಲ್ಲಿ ಪ್ರಬಲ ಪೈಪೋಟಿ ನೀಡುವಂತೆ ಕಾಣಲಿಲ್ಲ. ನಾಯಕ ರತೀಶ್ ನಾಯರ್ ಅವರ ಅಮೋಘ ಬ್ಲಾಕ್ ಮತ್ತು ಮನ್‌ದೀಪ್ ಸಿಂಗ್ ಅವರ ಅಮೋಘ ದಾಳಿಯ ಆಟದಿಂದ ಒಎನ್‌ಜಿಸಿ 25-21, 25-21, 25-17ರಲ್ಲಿ ಜಯಗಳಿಸಿತು. ಕೆಎಸ್‌ಇಬಿ ಪರ ಮನು ಜೋಸೆಫ್ ಅವರಿಂದ ಮಾತ್ರ ಉತ್ತಮ ಆಟ ಬಂತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry