ಒಎಫ್‌ಸಿ ಪರಿಶೀಲನೆ ಸಮಿತಿ ರಚನೆ

7

ಒಎಫ್‌ಸಿ ಪರಿಶೀಲನೆ ಸಮಿತಿ ರಚನೆ

Published:
Updated:

ಬೆಂಗಳೂರು: ನಗರದಲ್ಲಿ ಅನಧಿಕೃತವಾಗಿ ಅಳವಡಿಸಲಾದ ಆಪ್ಟಿಕಲ್ ಫೈಬರ್ ಕೇಬಲ್‌ಗಳ (ಒಎಫ್‌ಸಿ) ಕುರಿತು ಪರಿಶೀಲನೆ ನಡೆಸಲು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ), ಯಡಿಯೂರು ವಾರ್ಡ್‌ ಸದಸ್ಯ ಎನ್‌.ಆರ್‌. ರಮೇಶ ಅವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿದೆ.ಎಸ್‌. ಹರೀಶ್‌, ಸಿ.ಕೆ. ರಾಮಮೂರ್ತಿ, ಲತಾ ನರಸಿಂಹ­ಮೂರ್ತಿ, ಎನ್‌.ಜಿ. ಕೃಷ್ಣರೆಡ್ಡಿ, ಆರ್‌.ಎಸ್‌. ಸತ್ಯನಾರಾಯಣ, ಮುರುಗೇಶ ಮೊದಲಿಯಾರ್‌, ಕೆ. ಪ್ರಕಾಶ್‌ ಮತ್ತು ಮುಖ್ಯ ಎಂಜಿ­ನಿಯರ್‌ (ವಿಚಕ್ಷಣ) ಎಸ್‌. ಪ್ರಭಾ­ಕರ್‌ ಸಮಿತಿ ಸದಸ್ಯರಾಗಿದ್ದಾರೆ.ಆಪ್ಟಿಕಲ್‌ ಫೈಬರ್‌ ಕೇಬಲ್‌ನ ಉದ್ದ, ವಿಧಿಸಬೇಕಾದ ಭೂಬಾಡಿಗೆ ಮೊದಲಾದ ವಿಷಯಗಳ ನಿರ್ಧಾರವನ್ನು ಸಮಿತಿ ಕೈಗೊಳ್ಳಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry