ಒಕ್ಕಲಿಗರ ವೆಬ್ಸೈಟ್
ಕರ್ನಾಟಕ ರಾಜ್ಯ ಒಕ್ಕಲಿಗರ ಡೈರೆಕ್ಟರಿ ಟ್ರಸ್ಟ್: ಶನಿವಾರ ಒಕ್ಕಲಿಗರ ಡೈರೆಕ್ಟರಿ ದಶಮಾನೋತ್ಸವ, ಒಕ್ಕಲಿಗ ವರ್ಲ್ಡ್ ವೆಬ್ಸೈಟ್ ಆರಂಭ ಮತ್ತು ಅಭಿನಂದನಾ ಸಮಾರಂಭ. ಸಾನ್ನಿಧ್ಯ: ಡಾ. ಬಾಲಗಂಗಾಧರನಾಥ ಸ್ವಾಮೀಜಿ, ಕುಮಾರ ಚಂದ್ರಶೇಖರನಾಥ್ ಸ್ವಾಮೀಜಿ, ನಂಜಾವಧೂತ ಮಹಾಸ್ವಾಮಿ.
ಒಕ್ಕಲಿಗರ ಡೈರೆಕ್ಟರಿ ದಶಮಾನೋತ್ಸವ ಉದ್ಘಾಟನೆ: ಎಚ್.ಡಿ.ದೇವೇಗೌಡ. ಒಕ್ಕಲಿಗ ವರ್ಲ್ಡ್ ವೆಬ್ಸೈಟ್ ಲೋಕಾರ್ಪಣೆ: ಎಸ್.ಎಂ.ಕೃಷ್ಣ. ಮಾಜಿ ಕೇಂದ್ರ ಸಚಿವ ಅಜಿತ್ ಸಿಂಗ್ ಅವರಿಂದ ‘ಭಾರತೀಯ ಮೂಲಧರ್ಮ ನಾಥಪಂಥ ಒಕ್ಕಲಿಗರು’ ಕೃತಿ ಲೋಕಾರ್ಪಣೆ. ನಂತರ ಅಮೆರಿಕದಲ್ಲಿನ ಭಾರತದ ರಾಯಭಾರಿ ಕಚೇರಿಯ ಅಭಿವೃದ್ದಿ ಅಧಿಕಾರಿ ಆರತಿ ಕೃಷ್ಣ, ಜಯದೇವ ಹೃದ್ರೋಗ ಮತ್ತು ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್.
ಅಮೆರಿಕಾದ ಅಂತರರಾಷ್ಟ್ರೀಯ ಕ್ರೀಡಾಪಟು ವಿಕಾಸ್ ಗೌಡ, ಕನ್ನಡ ಸಾಹಿತ್ಯ ಪರಿಷತ್ತಿನ ಡಾ.ನಲ್ಲೂರು ಪ್ರಸಾದ್, ಆಳ್ವ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಮೋಹನ್ ಆಳ್ವ, ಅಂತರರಾಷ್ಟ್ರೀಯ ಟೆನ್ನಿಸ್ ಆಟಗಾರ್ತಿ ಪೂಜಾಶ್ರೀ ವೆಂಕಟೇಶ್ ಅವರಿಗೆ ಸನ್ಮಾನ. ಅತಿಥಿಗಳು: ಎ.ಎಂ.ಪಲ್ಲಂರಾಜು, ಅಂಬರೀಶ್, ಸಚಿವ ಅಶೋಕ, ಶಾಸಕ ಡಿ.ಕೆ.ಶಿವಕುಮಾರ್, ಮೇಯರ್ ಎಸ್.ಕೆ.ನಟರಾಜ್. ನಟ ಸುರೇಶ್ ಗೋಪಿ, ಕೇಂದ್ರ ಕಸ್ಟಮ್ ಸುಂಕ ಮತ್ತು ಸೇವಾ ತೆರಿಗೆ ಇಲಾಖೆಯ ಸಹಾಯಕ ಆಯುಕ್ತ ಜೆ.ದರ್ಶನ್ ಗೌಡ.
ಸ್ಥಳ; ರವೀಂದ್ರ ಕಲಾ ಕ್ಷೇತ್ರ ಜೆ.ಸಿ.ರಸ್ತೆ. ಬೆಳಿಗ್ಗೆ 10.30.
ಮಾಧ್ಯಮ ಪ್ರಶಸ್ತಿ
ಕರ್ನಾಟಕ ಮಾಧ್ಯಮ ಅಕಾಡೆಮಿ: ಸೋಮವಾರ 2008, 2009ನೇ ಸಾಲಿನ ಪ್ರಶಸ್ತಿ ಪ್ರದಾನ.
ಪ್ರಜಾವಾಣಿ ಸಂಪಾದಕ ಕೆ.ಎನ್. ಶಾಂತಕುಮಾರ್, ಔಟ್ಲುಕ್ ಸಂಪಾದಕ ಕೃಷ್ಣಕುಮಾರ್ ಅವರಿಗೆ ವಿಶೇಷ ಪ್ರಶಸ್ತಿ, ಪತ್ರಕರ್ತ ವಿಶ್ವೇಶ್ವರ ಭಟ್ ಮತ್ತು ಗೌರಿ ಲಂಕೇಶ್ ಅವರಿಗೆ ವರ್ಷದ ಪ್ರಶಸ್ತಿ, ಹಿರಿಯ ಪತ್ರಕರ್ತರುಗಳಿಗೆ ಪುರಸ್ಕಾರ, ಅತ್ಯುತ್ತಮ ವರದಿ ಲೇಖನಗಳಿಗೆ ಬಹುಮಾನ ಪ್ರದಾನ. ಅಧ್ಯಕ್ಷತೆ: ಪಾಟೀಲ ಪುಟ್ಟಪ್ಪ. ಪ್ರಶಸ್ತಿ ಪ್ರದಾನ: ಪ್ರೆಸ್ ಕೌನ್ಸಿಲ್ ಅಧ್ಯಕ್ಷ ನ್ಯಾಯಮೂರ್ತಿ ಎ.ಎನ್. ರಾಯ್. ಅತಿಥಿಗಳು: ಡಿ.ಪಿ. ಪರಮೇಶ್ವರ, ರಮೇಶ ಝಳಕಿ, ಡಾ. ಮುದ್ದುಮೋಹನ್.
ಸ್ಥಳ: ಚೌಡಯ್ಯ ಸ್ಮಾರಕ ಸಭಾಂಗಣ, ವೈಯಾಲಿಕಾವಲ್. ಸಂಜೆ 6.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.