ಒಕ್ಕಲಿಗರ ಸಂಘಕ್ಕೆ ಶಾಂತಿಯುತ ಮತದಾನ

7

ಒಕ್ಕಲಿಗರ ಸಂಘಕ್ಕೆ ಶಾಂತಿಯುತ ಮತದಾನ

Published:
Updated:

ತುಮಕೂರು: ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರ ಎರಡು ಸ್ಥಾನ­ಗಳಿಗೆ ಜಿಲ್ಲೆಯಲ್ಲಿ ಭಾನುವಾರ ನಡೆದ ಮತದಾನ ಶಾಂತಿಯುತವಾಗಿತ್ತು.ನಗರದ ಹಳೆ ಡಯಟ್‌ ಕಟ್ಟಡದಲ್ಲಿ ಬೆಳಿಗ್ಗೆಯಿಂದಲೇ ಮತದಾರರು ಸಾಲು­ಗಟ್ಟಿ ನಿಂತು ಮತ ಚಲಾಯಿಸಿದರು. ಬೆಳಿಗ್ಗೆ 10ರ ನಂತರ ಜನಜಂಗುಳಿ ಹೆಚ್ಚಾಯಿತು. ಡಯಟ್‌ ಕಟ್ಟಡದಲ್ಲಿ 11 ಬೂತ್‌ಗಳನ್ನು ಸ್ಥಾಪಿಸಿದ್ದು, ಸಂಜೆ 4ರವರೆಗೆ ನಿರಂತರವಾಗಿ ಮತದಾನ ನಡೆಯಿತು.ಮತದಾನಕ್ಕೆ ಸಂಘದ ಗುರುತಿನ ಪತ್ರವನ್ನು ಕಡ್ಡಾಯ ಮಾಡಲಾಗಿತ್ತು. ಡಯಟ್‌ ಆವರಣದ ಒಳಗೆ ಪ್ರವೇಶಿಸು­ವಾಗಲೇ ಪೊಲೀಸರು ಗುರುತಿನ ಪತ್ರವನ್ನು ಪರೀಕ್ಷಿಸಿ ಒಳಗೆ ಬಿಡುತ್ತಿದ್ದರು. ಅಲ್ಲದೆ ಒಳಗೆ ಗುಂಪು ಗೂಡದಂತೆ ಮತ ಹಾಕಿದವರನ್ನು ಹೊರಗೆ ಕಳುಹಿಸುತ್ತಿದ್ದರು.ಸ್ಥಳದಲ್ಲಿ ಭದ್ರತೆಗಾಗಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಹಾಗೂ ಪೊಲೀಸರನ್ನು ನಿಯೋಜಿಸ­ಲಾಗಿತ್ತು. ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಮತ್ತು ಬೆಂಬಲಿಗರು ಮತದಾನ ಸ್ಥಳದಲ್ಲಿಯೇ ಇದ್ದು ಮತಯಾಚನೆ ಮಾಡುತ್ತಿದ್ದರು.ಜನರ ಕುತೂಹಲ: ಡಯಟ್‌ ಸಭಾಂಗಣ­ದಿಂದ ಅಮಾನಿಕೆರೆ ರಸ್ತೆ­ವರೆಗೆ ಜನ ಗುಂಪುಗೂಡಿ ನೆರೆದಿದ್ದರು. ಅಭ್ಯರ್ಥಿಗಳು ಮತ್ತು ಅವರ ಹಿಂಬಾಲ­ಕರು ಅಮಾನಿಕೆರೆ ರಸ್ತೆಯಲ್ಲಿ ಶಾಮಿ­ಯಾನ ಹಾಕಿಸಿ ಬಹಿರಂಗವಾಗಿ ಮತ­ದಾರರಿಗೆ ತಿಂಡಿ, ಕುಡಿಯುವ ನೀರು ಮುಂತಾದ ವ್ಯವಸ್ಥೆ ಮಾಡಿದ್ದರು.ಅಲ್ಲದೆ ಗ್ರಾಮೀಣ ಪ್ರದೇಶಗಳಿಂದ  ಕಾರು, ವ್ಯಾನ್‌ ಹತ್ತಾರು ವಾಹನ­ಗಳಲ್ಲಿ ಕರೆದುಕೊಂಡು ಬಂದು ಮತ ಹಾಕಿಸುತ್ತಿದ್ದರು. ಈ ಚುನಾವಣೆಗೂ ಸಾಮಾನ್ಯ ಎಲ್ಲ ನೀತಿ ಸಂಹಿತೆಗಳು ಅನ್ವಯವಾಗುತ್ತವೆ. ಆದರೂ ಪೊಲೀಸರು ಮತ್ತು ಸಹಕಾರ ಇಲಾಖೆ ಅಧಿಕಾರಿಗಳು ಈ ಬಗ್ಗೆ ಚಕಾರ ಎತ್ತಲಿಲ್ಲ.ಇಂದು ಫಲಿತಾಂಶ

ಜಿಲ್ಲೆಯಲ್ಲಿ ಶೇ 87.92 ರಷ್ಟು ಮತದಾನ ನಡೆದಿದೆ. ಜಿಲ್ಲೆಯ ಒಟ್ಟು 19545 ಮತದಾರರಲ್ಲಿ 17182 ಮಂದಿ ಮತ ಚಲಾಯಿಸಿದ್ದಾರೆ.

ತಾಲ್ಲೂಕುವಾರು ವಿವರ: ತುಮಕೂರು ಶೇ 85, ಕುಣಿಗಲ್‌ ಶೇ 88.26, ಕೊರಟಗೆರೆ ಶೇ 93.65, ಗುಬ್ಬಿ ಶೇ 88, ತಿಪಟೂರು ಶೇ 90.38, ತುರುವೇಕರೆ ಶೇ 89.5, ಮಧುಗಿರಿ ಶೇ 88.44, ಶಿರಾ ಶೇ 84.52 ಮತದಾನವಾಗಿದೆ.ಇಂದು ಮತ ಎಣಿಕೆ: ನಗರದ ಹಳೆ ಡಯಟ್‌ ಸಭಾಂಗಣದಲ್ಲಿ ಸೋಮವಾರ ಬೆಳಿಗ್ಗೆ 9ರಿಂದ ಮತ ಎಣಿಕೆ ನಡೆಯಲಿದೆ. ಸಂಜೆ ವೇಳೆಗೆ ಫಲಿತಾಂಶ ಹೊರಬೀಳಬಹುದು ಎಂದು ಸಹಕಾರ ಇಲಾಖೆ ಉಪ ನಿಬಂಧಕ ಬಾಲಶೇಖರ್‌ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry