ಭಾನುವಾರ, ನವೆಂಬರ್ 17, 2019
29 °C

ಒಕ್ಕಲಿಗರ ಸಂಘದ ಗುರುತಿನ ಚೀಟಿ ವಿತರಣೆ

Published:
Updated:

ರಾಮನಗರ: ಒಕ್ಕಲಿಗರ ಸಂಘದ ಅಜೀವ ಸದಸ್ಯರಿಗೆ ಗುರುತಿನ ಚೀಟಿ ವಿತರಿಸುವ ಕಾರ್ಯಕ್ರಮ ರಾಮನಗರ ಜಿಲ್ಲೆಯಲ್ಲಿ ಪ್ರಾರಂಭವಾಗಿದೆ. ಕನಕಪುರದಲ್ಲಿ ಇದೇ 15ರಿಂದಲೇ ಇದಕ್ಕೆ ಚಾಲನೆ ನೀಡಲಾಗಿದ್ದು, ಇದೇ 17ರವರೆಗೆ ರೋಟರಿ ಭವನದಲ್ಲಿ ನಡೆಯುತ್ತಿರುತ್ತದೆ.ಚನ್ನಪಟ್ಟಣದಲ್ಲಿ ಇದೇ 18ರಿಂದ 20ವರೆಗೆ ಸಾರ್ವಜನಿಕ ಹೈಸ್ಕೂಲ್ ಆವರಣದಲ್ಲಿ, ರಾಮನಗರದಲ್ಲಿ ಇದೇ 18ರಿಂದ 19ರವರೆಗೆ ಶಾಂತಿನಿಕೇತನ ವಿದ್ಯಾಸಂಸ್ಥೆ ಆವರಣದಲ್ಲಿ, ಮಾಗಡಿಯಲ್ಲಿ ಇದೇ 18ರಿಂದ 19ರವರೆಗೆ ತಾಲ್ಲೂಕು ಒಕ್ಕಲಿಗರ ಸಂಘದ ಕಚೇರಿಯಲ್ಲಿ ಸಂಘದ ಸದಸ್ಯರಿಗೆ ಗುರುತಿನ ಚೀಟಿ ವಿತರಿಸಲಾಗುವುದು. ನಿಗದಿತ ದಿನದಂದು ಬೆಳಿಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಗುರುತಿನ ಚೀಟಿ ವಿತರಣೆ ನಡೆಯಲಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಡಾ.ಕೆ.ಮಹದೇವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.2008ರ ಹಿಂದೆ ಗುರುತಿನ ಚೀಟಿ ಪಡೆದಿರುವ ಸದಸ್ಯರುಗಳಿಗೂ ಹೊಸ ನಮೂನೆಯ ಗುರುತಿನ ಚೀಟಿಗಳನ್ನು ನೀಡಲಾಗುವುದು. ಈ ಸದಸ್ಯರು ತಮ್ಮ ಹಳೆಯ ಗುರುತಿನ ಚೀಟಿಯನ್ನು ವಾಪಸು ನೀಡಿ, ಹೊಸ ಗುರುತಿನ ಚೀಟಿಗಳನ್ನು ಪಡೆದುಕೊಳ್ಳಬಹುದು ಎಂದು ಅವರು ಹೇಳಿದ್ದಾರೆ.ಮಾಹಿತಿಗೆ: 080-26611031/96869 65466 ಸಂಪರ್ಕಿಸಬಹುದು.

ಪ್ರತಿಕ್ರಿಯಿಸಿ (+)