ಒಕ್ಕಲಿಗರ ಸಂಘ: ಮುಗಿಯದ ಮತ ಎಣಿಕೆ

7

ಒಕ್ಕಲಿಗರ ಸಂಘ: ಮುಗಿಯದ ಮತ ಎಣಿಕೆ

Published:
Updated:

ಬೆಂಗಳೂರು: ರಾಜ್ಯ ಒಕ್ಕಲಿಗರ ಸಂಘದ ಬೆಂಗಳೂರು ನಗರ, ಗ್ರಾಮಾಂತರ ಹಾಗೂ ರಾಮನಗರ ಜಿಲ್ಲಾ ಕ್ಷೇತ್ರ­ಗಳಿಗೆ ಭಾನುವಾರ ನಡೆದ ಚುನಾ­ವಣೆಯ ಮತ ಎಣಿಕೆ ಕಾರ್ಯ ಗುರು­ವಾರ ತಡರಾತ್ರಿಗೂ ಮುಂದು­ವರಿಯಿತು. ಮತ ಎಣಿಕೆಯನ್ನು ತ್ವರಿತ­ಗೊಳಿ­ಸುವ ನಿಟ್ಟಿನಲ್ಲಿ ಬುಧವಾರ 300 ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.ಗುರುವಾರ ಮತ್ತೆ ಹೆಚ್ಚುವರಿ­ಯಾಗಿ 200 ಸಿಬ್ಬಂದಿಯ ನೆರವು ಪಡೆಯುವ ಮೂಲಕ ಎಣಿಕೆಯನ್ನು ಚುರುಕು­ಗೊಳಿಸಲಾಯಿತು. ಈ ಕ್ಷೇತ್ರ­ಗಳ 15 ಸ್ಥಾನಗಳಿಗೆ ನಡೆದ ಚುನಾ­ವಣೆಯ ಮತ ಎಣಿಕೆ ಸೋಮವಾರ ಆರಂಭ­ವಾಗಿತ್ತು. ಗೊಂದಲ ಉಂಟಾ­ಗಿದ್ದರಿಂದ ಮರುಎಣಿಕೆ ಮಾಡ­ಲಾ­ಯಿತು. ಪತ್ರಿಕೆ ಮುದ್ರಣಕ್ಕೆ ಹೋಗು­ವ­ವರೆಗೂ ಮತ ಎಣಿಕೆ ನಡೆದಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry