ಭಾನುವಾರ, ಏಪ್ರಿಲ್ 11, 2021
25 °C

ಒಗ್ಗಟ್ಟಿನಿಂದ ಬಾಳಲು ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಒಗ್ಗಟ್ಟಿನಿಂದ ಬಾಳಲು ಸಲಹೆ

ಬಾಗಲಕೋಟೆ: ಪ್ರತಿಯೊಬ್ಬರೂ ಸ್ವಾರ್ಥ ಮರೆತು, ಎಲ್ಲರೊಂದಿಗೆ ಬೆರೆತು ಬಾಳಬೇಕೆನ್ನುವ ಗುಣ  ಬೆಳೆಸಿಕೊಂಡಾಗ ಮಾತ್ರ ಪ್ರತಿಯೊಂದು ಸಮಾಜ ಉಜ್ವಲವಾಗಿ ಬೆಳೆದು, ಬೆಳಗಲು ಸಾಧ್ಯ ಎಂದು ಕೃಷ್ಣ ಶಾಸ್ತ್ರಿ ಭಾನುವಾರ ಇಲ್ಲಿ ಹೇಳಿದರು.ಅವರು ನಗರದ ಹೇಮ-ವೇಮ ಸಂಸ್ಥೆ ವಿವೇಕಾನಂದ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ನಗರ, ನವನಗರ ಹಾಗೂ ವಿದ್ಯಾಗಿರಿ ವಲಯದಲ್ಲಿರುವ ರಡ್ಡಿ ಸಮಾಜ ಬಾಂಧವರ ಸಮಾವೇಶ(ಸ್ನೇಹಕೂಟ) ಉದ್ಘಾಟಿಸಿ ಮಾತನಾಡಿದರು.ವ್ಯಕ್ತಿ ಶ್ರೀಮಂತಿಕೆಯಿಂದ ದೊಡ್ಡವನಾಗುವುದಿಲ್ಲ. ಆತನ ಭಾವನೆ, ವಿಚಾರ ತನಗಲ್ಲದೇ ಸಮಾಜದ ಜನರಿಗಾಗಿ ತುಡಿಯುವ ಮನಸ್ಸಿರಬೇಕು. ತನ್ನ ಸಮಾಜದ ಕಸಬು, ಧರ್ಮಪಾಲನೆ ಹೀಗೆ ತನ್ನತನವನ್ನು ಮರೆತು ನಡೆದುದಾದರೆ ಅದು ಸಮಾಜದ ಹಿನ್ನಡೆಗೆ ಕಾರಣವಾದೀತು ಎಂಬುದನ್ನು ರಡ್ಡಿ ಸಮಾಜದ ಬಾಂಧವರು ಅರಿತು ಎಲ್ಲರೂ ನನ್ನವರು, ನನ್ನ ಸಮಾಜ ಎಂಬ ಕಳಕಳಿಯನ್ನು ಹೊಂದಿ ಸಮಾಜವನ್ನು ಕಟ್ಟುವ ಕೆಲಸದಲ್ಲಿ ತೊಡಗುವಂತೆ ಕೃಷ್ಣ ಶಾಸ್ತ್ರಿಗಳು ಸಲಹೆ ನೀಡಿದರು.

 

ರಡ್ಡಿ ಸಮಾಜದ ಸಮಸ್ತ ಪಂಗಡಗಳು ಒಂದಾಗಬೇಕು. ಪ್ರತಿ ಕ್ಷೇತ್ರದಲ್ಲೂ ಆ ಒಗ್ಗಟ್ಟಿನ ಪ್ರತಿಫಲ ಕಾಣುವಂತಾಗಬೇಕು ಎಂದು ಡಾ.ಎಸ್.ಎನ್.ಅಮಾತೆಪ್ಪನವರ ರಡ್ಡಿ ಹೇಳಿದರು. ಪ್ರೊ.ಶಕುಂತಲಾ ನಾವಲಗಿ ಮಾತನಾಡಿದರು.ಮೇ 10 ರಂದು ನಡೆಯಲಿರುವ ರಾಜ್ಯ ಮಟ್ಟದ ರಡ್ಡಿ ಸಮಾವೇಶ ಹಾಗೂ ಹೇಮರಡ್ಡಿ ಮಲ್ಲಮ್ಮನ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ಜನ ಸೇರಬೇಕೆಂದು ಅಧ್ಯಕ್ಷತೆ ವಹಿಸಿದ್ದ  ಹೇಮ-ವೇಮ ಸಂಸ್ಥೆಯ ಗೌರವಾಧ್ಯಕ್ಷ ಟಿ.ಎಸ್. ಗಂಗಲ್ ಮನವಿ ಮಾಡಿಕೊಂಡರು.

 

ಎಸ್.ಆರ್.ಪಾಟೀಲ(ಅನಗವಾಡಿ), ಮಾಜಿ ಶಾಸಕ ಜಿ.ವಿ. ಮಂಟೂರ, ಡಾ.ಆರ್.ಟಿ. ಪಾಟೀಲ, ಡಾ. ವಿ.ಆರ್. ಸೋರಗಾಂವಿ, ಗೀತಾ ಯಡಹಳ್ಳಿ, ಮಲ್ಲಮ್ಮ ಪಾಟೀಲ, ಜಯಲಕ್ಷ್ಮಿ ಪಾಟೀಲ, ಸುಮಂಗಲಾ ಹದ್ಲಿ ಹಾಜರಿದ್ದರು.ಶ್ರುತಿ ಪಾಟೀಲ ಪ್ರಾರ್ಥಿಸಿದರು. ಹೇಮ-ವೇಮ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜಿ.ಆರ್. ನಾವಲಗಿ ಸ್ವಾಗತಿಸಿದರು. ಸಂಸ್ಥೆಯ ಕಾರ್ಯಾಧ್ಯಕ್ಷ ಎಸ್.ಟಿ. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.  ಸಿ.ಎನ್. ಬಾಳಕ್ಕನವರ ವಂದಿಸಿದರು. ಸಂಜಯ ನಡುವಿನಮನಿ ನಿರೂಪಿಸಿದರು.

 

ವಿವಿಧ ಸ್ಪರ್ಧೆ ವಿಜೇತರುನಗರದ ಹೇಮ-ವೇಮ ಸಂಸ್ಥೆ ಭಾನುವಾರ ಏರ್ಪಡಿಸಿದ್ದ ರಡ್ಡಿ ಸಮಾಜ ಬಾಂಧವರ ಸಮಾವೇಶ (ಸ್ನೇಹಕೂಟ) ಅಂಗವಾಗಿ ಮಹಿಳೆಯರಿಗಾಗಿ ಹಮ್ಮಿಕೊಂಡಿದ್ದ ಮ್ಯುಜಿಕಲ್ ಚೇರ್ ಸ್ಪರ್ಧೆಯಲ್ಲಿ ಸವಿತಾ ಲೆಂಕೆನ್ನವರ, ಮಕ್ಕಳಿಗಾಗಿನ ಡಂಬೆಲ್ಸ್ ರೇಸ್‌ನಲ್ಲಿ ಪ್ರಿಯಾಂಕಾ ಪಾಟೀಲ ಪ್ರಥಮ ಸ್ಥಾನ ಪಡೆದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರು ಈ ಕೆಳಗಿನಂತಿದ್ದಾರೆ.

 

ಬಾಂಬೆ ಇನ್ ದಿ ಸಿಟಿ ಸ್ಪರ್ಧೆ: ಇಂದು ಪಾಟೀಲ ಪ್ರಥಮ, ಮಹಾದೇವಿ ಕಟಗೇರಿ ದ್ವಿತಿಯ, ಶೋಭಾ ಕಾಮರಡ್ಡಿ ತೃತೀಯ.ಮ್ಯುಜಿಕಲ್ ಚೇರ್: ಸವಿತಾ ಲೆಂಕನ್ನವರ ಪ್ರಥಮ, ಮಂಜುಳಾ ಪಾಟೀಲ ದ್ವಿತೀಯ, ಸುನೀತಾ ವಾಸನದ ತೃತೀಯ. ಪಾಸಿಂಗ್ ದಿ ಬಾಲ್: ಸುಮಂಗಲಾ ಕಾಳವ್ವಗೋಳ ಪ್ರಥಮ, ಸುನೀತಾ ಪಾಟೀಲ ದ್ವಿತೀಯ, ಭಾರತಿ ಪಾಟೀಲ ತೃತೀಯ. ಲಕ್ಕಿ ಗೇಮ್: ಶಾವಂತ್ರೆವ್ವ ತೆಗ್ಗಿ ಪ್ರಥಮ, ಗೀತಾ ವೀರರಡ್ಡಿ ದ್ವಿತೀಯ ಹಾಗೂ ಅಕ್ಕಮಹಾದೇವಿ ಬಾಳಕ್ಕನವರ ತೃತೀಯ. ಮಕ್ಕಳಿಗಾಗಿನ ಡಂಬೆಲ್ಸ ರೇಸ್: ಪ್ರಿಯಾಂಕಾ  ಪಾಟೀಲ ಪ್ರಥಮ, ಸಿಂಚನಾ ಯರಾಸಿ ದ್ವಿತೀಯ, ಅದಿತಿ  ಪಾಟೀಲ ತೃತೀಯ. ಬಾಲ್ ಸರ್ಕಲ್: ಪ್ರೀತಿ ನಾಯಕ ಪ್ರಥಮ, ಶ್ರೇಯಾ ಪಾಟೀಲ ದ್ವಿತೀಯ, ಸಾಕ್ಷಿ  ನಾಡಗೌಡ್ರ ತೃತೀಯ.

ಲಕ್ಕಿ ಗೇಮ್: ಪ್ರಿಯಾಂಕಾ ಪಾಟೀಲ ಪ್ರಥಮ, ಶಿವಾನಂದ ಪಾಟೀಲ ದ್ವಿತೀಯ, ರೋಶನ್ ಮೇಟಿ ತೃತೀಯ. ಮ್ಯುಜಿಕಲ್ ಚೇರ್: ರಚನಾ  ಲೆಂಕೆಣ್ಣವರ ಪ್ರಥಮ, ಶ್ರೀದೇವಿ ಮಜ್ಜಗಿ ದ್ವಿತೀಯ, ಸುಜಾತಾ  ರುದ್ರಗಂಟಿ ತೃತಿಯ. ಲಕ್ಕಿ ಗೇಮ್(ಬಾಲಕರಿಗೆ):  ಸಮರ್ಥ ಕಟಗೇರಿ ಪ್ರಥಮ, ಕರುಣಾ ಮುದನಿ ದ್ವಿತೀಯ, ಶಿವಾನಂದ ಪಾಟೀಲ ತೃತೀಯ.

ಸರ್ಕಲ್ ರೇಸ್: ಪ್ರೀತಿ  ನಾಯಕ ಪ್ರಥಮ, ಪ್ರೀತಿ  ಮರಕಟ್ಟಿ ದ್ವಿತೀಯ, ಸೌಮ್ಯ  ಕೆರಕಲಮಟ್ಟಿ ತೃತೀಯ ಸ್ಥಾನ ಪಡೆದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.