ಒಗ್ಗಟ್ಟಿನಿಂದ ಶತ್ರು ಓಡಿಸಿ: ಶ್ರೀಧರ್ ಸ್ವಾಮಿ

7

ಒಗ್ಗಟ್ಟಿನಿಂದ ಶತ್ರು ಓಡಿಸಿ: ಶ್ರೀಧರ್ ಸ್ವಾಮಿ

Published:
Updated:

ಕಡೂರು: ಯಾವುದೇ ವ್ಯಕ್ತಿ ಪರಿಶುದ್ಧನಾಗಬೇಕಾದರೆ ಶರೀರಕ್ಕೆ ಹಾಗೂ ಮೆದುಳಿಗೆ ಕೆಲಸ ನೀಡಬೇಕು ಎಂದು ಬೆಂಗಳೂರಿನ ಎನ್‌ಐಟಿ ಕಾಲೇಜು ಉಪನ್ಯಾಸಕ ಹಾಗೂ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಪ್ರಾಂತ್ಯ ಕಾರ್ಯವಾಹ ಶ್ರೀಧರ್ ಸ್ವಾಮಿ ತಿಳಿಸಿದರು.ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಭಾನುವಾರ ರಾಷ್ಟ್ರೀಯ ಸ್ವಯಂ ಸೇವಕ ಸಂಘ  ಸ್ವಾಮಿ ವೀವೇಕಾನಂದರ 150 ನೇ ಜಯಂತಿ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ತಾಲ್ಲೂಕು ಸಂಘೀಕ್ ಸಭೆಯ ಕುರಿತು ಉಪನ್ಯಾಸ ನೀಡಿದರು.ಒಗ್ಗಟ್ಟಿನಲ್ಲಿ ಶಕ್ತಿ ಇದೆ, ಒಗ್ಗಟ್ಟಿನಲ್ಲಿ ಬಲವಿದೆ ಇದನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿ ಕೊಂಡರೆ ಎಂತಹ ಶತ್ರುಗಳನ್ನು ಸಹ ಓಡಿಸಬಹುದು. ಸ್ವಾತಂತ್ರ್ಯ ಪೂರ್ವದಲ್ಲಿ ಸಾವಿರಾರು ವರ್ಷಗಳ ಕಾಲ ಅನೇಕರು ನಮ್ಮನ್ನು ಆಳಿದರು ನಂತರ ಭಾರತಕ್ಕೆ ಅನೇಕ ಪರೀಕ್ಷೆಗಳು ಬಂದವು. ಚೀನಾ,ಪಾಕಿಸ್ತಾನ ಯುದ್ಧಗಳಾದವು ಸೋತೆವು, ಗೆದ್ದೆವು ಇಂತಹ ಸಿಹಿ, ಕಹಿ ಅನುಭವಿಗಳಲ್ಲಿ ಸಾಗುತ್ತಿರುವ ನಾವುಗಳು ಬಲಿಷ್ಟ ಭಾರತ ಕಟ್ಟಬೇಕಾದರೆ ನಮ್ಮಲ್ಲಿ ಒಗ್ಗಟ್ಟು ಮುಖ್ಯ ಎಂದು ಕರೆ ನೀಡಿದರು.ನಮ್ಮಲ್ಲಿ ಶಿಸ್ತು ಸಹಿಷ್ಣುತೆಗಳನ್ನು ಮೂಡಿಸಿಕೊಂಡು ಜೀವನದಲ್ಲಿ ಉತ್ನತ ಆದರ್ಶವನ್ನು ಸ್ವೀಕರಿಸಿ, ಅದಕ್ಕಾಗಿ ಇಡೀ ಜೀವನವನ್ನು ಮುಡುಪಾಗಿಡಬೇಕು, ತ್ಯಾಗ, ಬಲಿದಾನಗಳನ್ನು ಮಾಡುವ ಧೈರ್ಯವನ್ನು ಕಲಿಯಬೇಕಾಗಿದೆ ಎಂದು ಕರೆ ನೀಡಿದರು.   ತಾಲ್ಲೂಕಿನಾದ್ಯಂತ ವಿವಿಧ ಹೋಬಳಿಗಳಿಂದ ಬಂದಿದ್ದ ಸುಮಾರು 150 ಕ್ಕೂ ಹೆಚ್ಚಿನ ಸ್ವಯಂ ಸೇವಕರು ವಿವಿಧ ಚಟುವಟಿಕೆಗಳಲ್ಲಿ    ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry