ಗುರುವಾರ , ಮೇ 6, 2021
31 °C

ಒಗ್ಗಟ್ಟಿನ ಪ್ರದರ್ಶನ ಅಗತ್ಯ: ವೆಟೋರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಒಗ್ಗಟ್ಟಿನ ಪ್ರದರ್ಶನ ಅಗತ್ಯ: ವೆಟೋರಿ

ಬೆಂಗಳೂರು: ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮುನ್ನಡೆಸಲಿರುವ ಡೇನಿಯಲ್ ವೇಟೋರಿ `ಈ ಟೂರ್ನಿ ಸವಾಲಿನಿಂದ ಕೂಡಿರಲಿದೆ~ ಎಂದಿದ್ದಾರೆ.ಆರಂಭದಲ್ಲಿ ಒಂದೆರಡು ಪಂದ್ಯಗಳಲ್ಲಿ ಸೋಲು ಅನುಭವಿಸಿದರೆ ಪ್ರಶಸ್ತಿಯ ಆಸೆ ಕೈಬಿಡಬೇಕು ಎಂದು ಅವರು ಭಾನುವಾರ ತಿಳಿಸಿದರು.. `ಆದಷ್ಟು ಬೇಗ ತಂಡದ ಎಲ್ಲ ಸದಸ್ಯರು ಪರಸ್ಪರರನ್ನು ಅರ್ಥೈಸಿಕೊಳ್ಳಬೇಕು. ಏಕೆಂದರೆ ಟೂರ್ನಿಗೆ ಇನ್ನು ಹೆಚ್ಚು ದಿನ ಉಳಿದಿಲ್ಲ. ಒಗ್ಗಟ್ಟಿನ ಪ್ರದರ್ಶನ ನೀಡುವುದು ಮುಖ್ಯ~ ಎಂದರು.`ಮೊದಲ ಎರಡೂ ಪಂದ್ಯಗಳಲ್ಲಿ ಸೋಲು ಅನುಭವಿಸಿದರೆ ಟೂರ್ನಿಯಿಂದ ಹೊರಬಿದ್ದಂತೆ. ಆದ್ದರಿಂದ ಇನ್ನುಳಿದ ಮೂರು- ನಾಲ್ಕು ದಿನಗಳಲ್ಲಿ ಕಠಿಣ ಅಭ್ಯಾಸ ನಡೆಸುವುದು~ ಎಂದರು. ಸೆಪ್ಟೆಂಬರ್ 23 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ತಂಡ ವಾರಿಯರ್ಸ್ ಜೊತೆ ಪೈಪೋಟಿ ನಡೆಸಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.