ಒಡಿಶಾದಲ್ಲಿ ಪಾಕ್ ಕ್ರಿಕೆಟ್ ಪಂದ್ಯಕ್ಕೆ ತೀವ್ರ ವಿರೋಧ

7
ಮಹಿಳಾ ವಿಶ್ವಕಪ್

ಒಡಿಶಾದಲ್ಲಿ ಪಾಕ್ ಕ್ರಿಕೆಟ್ ಪಂದ್ಯಕ್ಕೆ ತೀವ್ರ ವಿರೋಧ

Published:
Updated:
ಒಡಿಶಾದಲ್ಲಿ ಪಾಕ್ ಕ್ರಿಕೆಟ್ ಪಂದ್ಯಕ್ಕೆ ತೀವ್ರ ವಿರೋಧ

ಭುವನೇಶ್ವರ (ಐಎಎನ್‌ಎಸ್): ಐಸಿಸಿ ಮಹಿಳಾ ವಿಶ್ವಕಪ್ ಕ್ರಿಕೆಟ್ ಪಂದ್ಯಗಳು ಜ. 31 ರಿಂದ ಆರಂಭಗೊಳ್ಳಲಿದ್ದು ಒಡಿಶಾದಲ್ಲಿ ಪಾಕಿಸ್ತಾನ ತಂಡದ ಪಂದ್ಯಗಳನ್ನು ಅಯೋಜಿಸಿರುವುದನ್ನು ವಿರೋಧಿಸಿ ಪ್ರತಿಪಕ್ಷ ಬಿಜೆಪಿ ಕಾರ್ಯಕರ್ತರು ಮತ್ತು ಬಲಪಂಥೀಯ ಗುಂಪುಗಳ ಸದಸ್ಯರು ಒಡಿಶಾ ಕ್ರಿಕೆಟ್ ಸಂಸ್ಥೆಯ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.ಭಾರತೀಯ ಜನತಾ ಪಾರ್ಟಿ,  ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳದ ನೂರಕ್ಕೂ ಹೆಚ್ಚು ಕಾರ್ಯಕರ್ತರು ಕಟಕ್ ದಲ್ಲಿರುವ ಒಡಿಶಾ ಕ್ರಿಕೆಟ್ ಸಂಸ್ಥೆಯ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಅಲ್ಲದೆ ರಾಷ್ಟ್ರೀಯ ಹೆದ್ದಾರಿಯನ್ನೂ ತಡೆದು ಪ್ರತಿಭಟಿಸಿದರು.

ಅಂತರರಾಷ್ಟ್ರೀಯ ಒಪ್ಪಂದಕ್ಕೆ ಅನುಸಾರವಾಗಿ ಪಾಕಿಸ್ತಾನದ ಸೇನೆ ನಡೆದುಕೊಳ್ಳುವವರೆಗೂ ಪಾಕ್ ಆಟಗಾರರಿಗೆ ಭಾರತ ಪ್ರವೇಶಿಸಲು ಅವಕಾಶ ನೀಡುವುದಿಲ್ಲ ಎಂದು ಪ್ರತಿಭಟನಾಕಾರರು ತಿಳಿಸಿದರು.

ಗಡಿ ಪ್ರದೇಶದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿರುವ ಪರಿಣಾಮ ಪಾಕ್ ಪಂದ್ಯಗಳನ್ನು ನಡೆಸಲು ಅನುಮತಿ ನೀಡದಂತೆ ಒತ್ತಾಯಿಸಿ ಪ್ರತಿಭಟನಾಕಾರರು ಕ್ರಿಕೆಟ್ ಸಂಸ್ಥೆಯ ಅಧಿಕಾರಿಗಳಿಗೆ ಮನವಿ ಪತ್ರವನ್ನು ನೀಡಿದರು. ಜತೆಗೆ ಸರ್ಕಾರದ ವಿರುದ್ಧ ಘೋಷಣೆಳನ್ನು ಕೂಗಿದರು.ಇದೇ ವೇಳೆ ಎರಡು ಸ್ಥಳೀಯ ಪಕ್ಷಗಳಾದ ಉತ್ಕಲ್ ಭಾರತ್ ಮತ್ತು ಕಳಿಂಗ ಸೇನೆ ಸಹ ಒಡಿಶಾದಲ್ಲಿ ಪಾಕ್ ಪಂದ್ಯಗಳನ್ನು ಆಯೋಜಿಸಲು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ರಾಜ್ಯದ ಯಾವುದೇ ಭಾಗದಲ್ಲೂ ಪಾಕಿಸ್ತಾನದ ಆಟಗಾರರಿಗೆ ಕಾಲಿಡಲು ಬಿಡುವುದಿಲ್ಲ ಎಂದು ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿವೆ.

ಜ. 31ರಿಂದ ಮುಂಬೈನಲ್ಲಿ ಐಸಿಸಿ ಮಹಿಳಾ ವಿಶ್ವ ಕಪ್ ಕ್ರಿಕೆಟ್ ಆರಂಭಗೊಳ್ಳಲಿದ್ದು, ಮುಂಬೈನಲ್ಲಿ ಪಾಕಿಸ್ತಾನದ ಪಂದ್ಯಗಳನ್ನು ನಡೆಸಲು ಶಿವಸೇನೆ ತನ್ನ ವಿರೋಧ ವ್ಯಕ್ತಪಡಿಸಿದ್ದರಿಂದ ಕಟಕ್‌ಗೆ ಸ್ಥಳಾಂತರಿಸಲಾಗಿತ್ತು.ಗಡಿ ಭಾಗದಲ್ಲಿ ಪಾಕಿಸ್ತಾನ  ಕದನ ವಿರಾಮ ಉಲ್ಲಂಘಿಸಿದ ಪರಿಣಾಮ ಪಾಕಿಸ್ತಾನ ಆಟಗಾರರು ಭಾರತ ಪ್ರವೇಶಿಸುವುದು ಕಠಿಣವಾಗುತ್ತಿದ್ದು, ಎಲ್ಲೆಡೆ ಪಾಕ್ ಆಟಗಾರರ ವಿರುದ್ಧ ಪ್ರತಿಭಟನೆ ನಡೆಯುತ್ತಿದೆಹಾಕಿ ಇಂಡಿಯಾ ಲೀಗ್‌ನಲ್ಲಿ ಪಾಲ್ಗೊಂಡಿದ್ದ ಪಾಕಿಸ್ತಾನದ ಆಟಗಾರರ ವಿರುದ್ಧ ಶಿವಸೇನೆ ಮತ್ತು ಹಿಂದೂ ಯುವಕ ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಘಟನೆ ಹಿನ್ನೆಲೆಯಲ್ಲೇ ಒಡಿಶಾದಲ್ಲಿ ಪಾಕ್ ತಂಡದ ಪಂದ್ಯ ಆಯೋಜಿಸಿರುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry