ಶನಿವಾರ, ಮೇ 15, 2021
25 °C

ಒಡಿಶಾ: ಉನ್ನತ ಮಾವೋವಾದಿ ನಾಯಕ ಸನ್ಯಾಸಿ ಶರಣಾಗತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಲ್ಕನ್ ಗಿರಿ (ಒಡಿಶಾ): ಮಾವೋವಾದಿ ಅತ್ಯುನ್ನತ ನಾಯಕರಲ್ಲೊಬ್ಬನಾದ ಸನ್ಯಾಸಿ ಪೂಜಾರಿ (35)  ಬುಧವಾರ ಒಡಿಶಾದ ಮಲ್ಕನ್ ಗಿರಿ ಜಿಲ್ಲೆಯಲ್ಲಿ ಪೊಲೀಸರಿಗೆ ಶರಣಾಗತನಾಗಿದ್ದಾನೆ.ಬಂಡುಕೋರ ಸಂಘಟನೆಯಲ್ಲಿನ ತಾರತಮ್ಯ ಮತ್ತು ಯದ್ವಾತದ್ವ ಕೊಲೆಗಳಿಂದ ಭ್ರಮನಿರಸನಗೊಂಡು ತಾನು ಮಾವೋವಾದಿ ಶಿಬಿರ ತೊರೆದಿರುವುದಾಗಿ ಆತ ಹೇಳಿದ್ದಾನೆ.ಪಾಪ್ಲರ್ ಮಾವೋವಾದಿ ದಳದ ಪ್ರಾದೇಶಿಕ ಕಮಾಂಡರ್ ಸನ್ಯಾಸಿ ಪೂಜಾರಿ ಜಿಲ್ಲೆಯ ಚಿತ್ರಕೊಂಡ ಪ್ರದೇಶದ ಧೂಲಿಪತ್ ಗ್ರಾಮದವನಾಗಿದ್ದು, 11 ವರ್ಷಗಳನ್ನು ಮಾವೋವಾದಿ ಚಟುಟಿಕೆಗಳಲ್ಲಿ ಕಳೆದಿದ್ದಾನೆ ಎಂದು ಮಲ್ಕನ್ ಗಿರಿ ಪೊಲೀಸ್ ವರಿಷ್ಠಾಧಿಕಾರಿ ಅನಿರುದ್ಧ ಸಿಂಗ್  ನುಡಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುಂದೆ ಶರಣಾಗತನಾದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಪೂಜಾರಿ ~ಬಂಡುಕೋರ ನಾಯಕರು , ಅವರಲ್ಲೂ ನಿರ್ದಿಷ್ಟವಾಗಿ ಆಂಧ್ರ ಪ್ರದೇಶದಂತಹ ಇತರ ರಾಜ್ಯಗಳಿಗೆ ಸೇರಿದ ಬಂಡುಕೋರ ನಾಯಕರ ಸೌಜನ್ಯ ಹೀನತೆ ಮತ್ತು ತಾರತಮ್ಯ ಧೋರಣೆಗಳಿಂದ ಬೇಸತ್ತು ಉಗ್ರಗಾಮಿ ಚಟುವಟಿಕೆ ಬಿಟ್ಟು ಪೊಲೀಸರಿಗೆ ಶರಣಾಗಿರುವುದಾಗಿ ಹೇಳಿದ.ಇದಕ್ಕೂ ಹೆಚ್ಚಾಗಿ ಕೆಂಪು ಬಂಡುಕೋರರು ಮಾವೋವಾದಿ ಸಿದ್ಧಾಂತದಿಂದ ದೂರ ಹೋಗಿದ್ದು ವಿವೇಚನೆ ರಹಿತ ಹಿಂಸಾಚಾರ, ಮುಗ್ಧರ ಹತ್ಯೆ ಕೃತ್ಯಗಳಲ್ಲಿ ಷಾಮೀಲಾಗಿದ್ದಾರೆ ಎಂದು ಪೂಜಾರಿ ಹೇಳಿದ.~ನಾನು ಸಂಪೂರ್ಣ ಭ್ರಮನಿರಸನಗೊಂಡಿದ್ದೇನೆ. ಆದ್ದರಿಂದ ಸಮಾಜದ ಮುಖ್ಯಪ್ರವಾಹಕ್ಕೆ ಬರಲು ನಿರ್ಧರಿಸಿದೆ~ ಎಂದು ಪೂಜಾರಿ ನುಡಿದ.ಶರಣಾಗತ ಮಾವೋವಾದಿ ನಾಯಕನಿಗೆ ಮಾವೋ ಶರಣಾಗತಿ ಸಂಬಂಧ ರೂಪಿಸಲಾದ ರಾಜ್ಯ ಸರ್ಕಾರದ ನೀತಿಗಳಿಗೆ ಅನುಗುಣವಾಗಿ ಸವಲತ್ತುಗಳನ್ನು ಒದಗಿಸಲಾಗುವುದು ಎಂದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.