ಒಡಿಶಾ: ಗುಂಡಿನ ಕಾಳಗದಲ್ಲಿ 14 ನಕ್ಸಲೀಯರ ಸಾವು

7

ಒಡಿಶಾ: ಗುಂಡಿನ ಕಾಳಗದಲ್ಲಿ 14 ನಕ್ಸಲೀಯರ ಸಾವು

Published:
Updated:

ಭುವನೇಶ್ವರ (ಐಎಎನ್ ಎಸ್) ಒಡಿಶಾದ ಮಲ್ಕನ್ ಗಿರಿ ಜಿಲ್ಲೆಯಲ್ಲಿ ಪೊಲೀಸರೊಂದಿಗೆ  ಶನಿವಾರ ನಡೆದ  ಗುಂಡಿನ ಕಾಳಗದಲ್ಲಿ ಕನಿಷ್ಠ 14 ಮಂದಿ ನಕ್ಸಲೀಯರು  ಹತರಾಗಿದ್ದಾರೆ.

ಛತ್ತಿಸ್‌ಗಢ ಗಡಿಗೆ ಸಮೀಪದ ಅರಣ್ಯದಲ್ಲಿ  ಹಲವು ನಿಮಿಷಗಳ ಕಾಲ ಈ ಗುಂಡಿನ  ಕಾಳಗ ನಡೆಯಿತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ  ಅಖಿಲೇಶ್ವರ್ ಸಿಂಗ್ ನೇತೃತ್ವದ ತಂಡದಲ್ಲಿ  ಜಿಲ್ಲಾ ಸ್ವಯಂ ಸೇವಕ ಪಡೆಯ ಸಿಬ್ಬಂದಿಯೂ ಇದ್ದ ಪೊಲೀಸ್ ತಂಡವು  ತಮ್ಮತ್ತ ನಕ್ಸಲಿಯರು ಗುಂಡು ಹಾರಿಸಿದಾಗ ಪ್ರತಿಯಾಗಿ ಅವರ ಮೇಲೆ ದಾಳಿ ನಡೆಸಿದರು.

ಈ ದಾಳಿಯಲ್ಲಿ 14 ಮಂದಿ ನಕ್ಸಲೀಯರು  ಹತರಾಗಿದ್ದಾರೆ. ಅಲ್ಲದೆ ಶಸ್ತ್ರಾಸ್ತ್ರಗಳನ್ನೂ ವಶಪಡಿಸಿಕೊಳ್ಳಲಾಯಿತು ಎಂದು  ಐಜಿಪಿ ಸೋಮೇಂದ್ರ ಪ್ರಿಯದರ್ಶಿ ತಿಳಿಸಿದ್ದಾರೆ.

ರಾಜಧಾನಿ ಭುವನೇಶ್ವರ ದಿಂದ 600 ಕಿ.ಮೀ ದೂರದಲ್ಲಿರುವ ಮಲ್ಕನ್ ಗಿರಿಯು ನಕ್ಸಲೀಯರ  ಪ್ರಬಲ ನೆಲೆಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry