ಒಡಿಶಾ: ಭಾರಿ ಮಳೆ

7

ಒಡಿಶಾ: ಭಾರಿ ಮಳೆ

Published:
Updated:
ಒಡಿಶಾ: ಭಾರಿ ಮಳೆ

ಭುವನೇಶ್ವರ (ಪಿಟಿಐ): ಒಡಿಶಾದಲ್ಲಿ ಮಹಾನದಿ ಸೇರಿದಂತೆ ಕೆಲವು ನದಿಗಳು ತುಂಬಿ ಹರಿಯುತ್ತಿದ್ದು 19 ಜಿಲ್ಲೆಗಳ ಸುಮಾರು 2,600 ಹಳ್ಳಿಗಳಿಗೆ ಪ್ರವಾಹ ಭೀತಿ ಉಂಟಾಗಿದೆ.  11 ಲಕ್ಷಕ್ಕೂ ಅಧಿಕ ಜನರು ತೊಂದರೆಗೆ ಸಿಲುಕಿದ್ದಾರೆ.ಮಳೆಯಿಂದ ಸತ್ತವರ ಸಂಖ್ಯೆ 16ಕ್ಕೆ ಏರಿದ್ದು, ಮೂವರು ಕಣ್ಮರೆಯಾಗಿದ್ದಾರೆ. ತೊಂದರೆಗೀಡಾದವರಿಗೆ ಪರಿಹಾರ ಕಾರ್ಯ ಮುಂದುವರಿದಿದೆ. ಪುರಿ, ಕೇಂದ್ರಪಾರ, ಕಟಕ್, ಜಗತ್‌ಸಿಂಗ್‌ಪುರ, ಸಂಬಲ್‌ಪುರ ಮತ್ತು ಸೋನೆಪುರ ಜಿಲ್ಲೆಗಳಲ್ಲಿ ಸಂಪರ್ಕ ವ್ಯವಸ್ಥೆ ಸಂಪೂರ್ಣ ಹಾನಿಗೊಂಡಿದ್ದು, ಪರಿಹಾರ ಕಾರ್ಯಕ್ಕೆ ಅಡ್ಡಿಯಾಗಿದೆ ಎನ್ನಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry