ಮಂಗಳವಾರ, ಜನವರಿ 21, 2020
28 °C

ಒಡೆಯರ್‌ ಅಸ್ಥಿ ವಿಸರ್ಜನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಒಡೆಯರ್‌ ಅಸ್ಥಿ ವಿಸರ್ಜನೆ

ಮೈಸೂರು: ಚಿರನಿದ್ರೆಗೆ ಜಾರಿದ ಶ್ರೀಕಂಠದತ್ತ ನರಸಿಂಹರಾಜ ಒಡೆ­ಯರ್‌ ಅವರ ಚಿತಾಭಸ್ಮ ಸ್ಥಳದಲ್ಲಿ ಅಸ್ಥಿಸಂಚಯನ ಮತ್ತು ಹಾಲುತುಪ್ಪ ಎರೆಯುವ ವಿಧಿ–ವಿಧಾನಗಳನ್ನು ಚದುರಂಗ ಕಾಂತರಾಜೇ ಅರಸ್‌ ಗುರುವಾರ ನೆರವೇರಿಸಿದರು.ಶ್ರೀರಂಗಪಟ್ಟಣದ ಪಶ್ಚಿಮವಾಹಿನಿ­ಯಲ್ಲಿ ಗಾಯತ್ರಿದೇವಿ ಅವರ ಪುತ್ರ ಚದುರಂಗ ಕಾಂತರಾಜೇ ಅರಸ್‌, ಕಾವೇರಿ ಸಂಗಮದಲ್ಲಿ ಕಾಮಾಕ್ಷಿ ದೇವಿ ಅವರ ಪತಿ ಆತ್ಮನ್ಯದೇವ, ಇಂದ್ರಾಕ್ಷಿ ದೇವಿ ಅವರ ಪತಿ ರಾಜಾ­ಚಂದ್ರರಾಜೇ ಅರಸ್‌ ಮತ್ತು ತಿರು­ಮಕೂಡಲಿನ ತ್ರಿವೇಣಿ ಸಂಗಮ­ದಲ್ಲಿ ಮೀನಾಕ್ಷಿದೇವಿ ಅವರ ಪುತ್ರ ವರ್ಚಸ್‌ ಸಿದ್ಧಲಿಂಗರಾಜೇ ಅರಸ್‌ ಅವರು ಸಂಚಯನ ಅಸ್ಥಿ ವಿಸರ್ಜಿ­­ಸಿ­ದರು.ಅರಮನೆಯ ವೈದಿಕರೊಬ್ಬರು ಹರಿದ್ವಾರ ಮತ್ತು ಕಾಶಿಗೆ ಅಸ್ಥಿ ವಿಸರ್ಜನೆಗೆ ತೆರಳಿದ್ದಾರೆ.

ಪ್ರತಿಕ್ರಿಯಿಸಿ (+)