ಸೋಮವಾರ, ಜನವರಿ 20, 2020
27 °C

ಒಡೆಯರ್‌ ನಿಧನಕ್ಕೆ ಸೋನಿಯಾ ಸಂತಾಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಶ್ರೀಕಂಠದತ್ತ ನರಸಿಂಹ­ರಾಜ ಒಡೆಯರ್‌ ಅವರ ಪತ್ನಿ ಪ್ರಮೋದಾದೇವಿ ಅವರಿಗೆ ಪತ್ರ ಬರೆದಿರುವ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು, ಒಡೆಯರ್‌ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.‘ಅವರ ನಿಧನದ ಸುದ್ದಿ ತಿಳಿದು ದುಃಖವಾಯಿತು. ಒಡೆಯರ್‌ ಅವರು ಪಕ್ಷದ ಹಿರಿಯ ಮುಖಂ­ಡ­ರಲ್ಲಿ ಒಬ್ಬರಾಗಿದ್ದರು. ಪಕ್ಷದ ಪರವಾಗಿ ಮತ್ತು ವೈಯಕ್ತಿಕವಾಗಿ ಅವರ ನಿಧನಕ್ಕೆ ಸಂತಾಪ ವ್ಯಕ್ತ­ಪಡಿಸುತ್ತೇನೆ. ಈ ಸಂದರ್ಭ­ದಲ್ಲಿ ನಿಮ್ಮ ನೋವು ಮತ್ತು ದುಃಖ ನನಗೆ ಅರ್ಥವಾಗುತ್ತದೆ. ಅದೆ­ಲ್ಲ­ವನ್ನೂ ಸಹಿಸುವ ಶಕ್ತಿ ನಿಮಗೆ ದೊರೆಯಲಿ ಎಂಬುದಾಗಿ ಬೇಡು­ತ್ತೇನೆ’ ಎಂದು ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)