ಒಣಗಿದ ಮರ, ಕೊಂಬೆ ತೆರವುಗೊಳಿಸಿ

ಶನಿವಾರ, ಜೂಲೈ 20, 2019
28 °C

ಒಣಗಿದ ಮರ, ಕೊಂಬೆ ತೆರವುಗೊಳಿಸಿ

Published:
Updated:

ನಗರದಲ್ಲಿ ಮಳೆ ಮತ್ತು ಬಿರುಗಾಳಿಗೆ ಸಿಲುಕಿ ಅಪಾಯದ ಅಂಚಿನಲ್ಲಿರುವ ಮರಗಳು ಮತ್ತು ಒಣಗಿ ಹೋಗಿರುವ ಮರದ ಕೊಂಬೆಗಳು ಬೀಳುವುದು ಸ್ಥಿತಿಯಲ್ಲಿದೆ. ನಗರದಲ್ಲಿ ಈಗಾಗಲೇ ಇಂತಹ ಅನೇಕ ಅವಘಡಗಳು ಸಂಭವಿಸಿವೆ.

ಆದರೂ ಇವುಗಳ ಬಗ್ಗೆ ಅಧಿಕಾರಿಗಳು ಕಾಳಜಿ ವಹಿಸಿರುವ ಉದಾಹರಣೆಗಳು ಕಡಿಮೆ. ಈಗಲಾದರೂ ಬಿ.ಬಿ.ಎಂ.ಪಿ. ಮತ್ತು ಅರಣ್ಯ ಇಲಾಖೆ ಅಪಾಯದ ಅಂಚಿನಲ್ಲಿರುವ ಮರಗಳು ಮತ್ತು ಒಣಗಿರುವ ಮರದ ಕೊಂಬೆಗಳ ಬಗ್ಗೆ ಗಮನ ಹರಿಸಿ ಅವುಗಳನ್ನು ಕತ್ತರಿಸಿ ಹಾಕಿ  ಜೀವ ಹಾನಿಯಾಗಿ ಪರಿಹಾರ ಕೊಡುವಂತಹ ಘಟನೆಗಳು ಸಂಭವಿಸದ ಹಾಗೆ ಎಚ್ಚರ ವಹಿಸಬೇಕಿದೆ.

- ಕೆ.ಎಸ್. ನಾಗರಾಜ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry