ಒತ್ತಡಕ್ಕೆ ಮಣಿದ ಭಾವನೆ ಮೂಡಿಸಲಾಗುತ್ತಿದೆ: ಜೇಟ್ಲಿ

5

ಒತ್ತಡಕ್ಕೆ ಮಣಿದ ಭಾವನೆ ಮೂಡಿಸಲಾಗುತ್ತಿದೆ: ಜೇಟ್ಲಿ

Published:
Updated:

ನವದೆಹಲಿ (ಪಿಟಿಐ): ‘2ಜಿ ಹಗರಣದ ತನಿಖೆಗೆ ಸರ್ಕಾರವೇ ಮುಂದಾಗಿ ಜೆಪಿಸಿಯನ್ನು ನೇಮಿಸಬೇಕಾಗಿತ್ತು. ಬದಲಿಗೆ ವಿರೋಧ ಪಕ್ಷಗಳ ಒತ್ತಡಕ್ಕೆ ಮಣಿದು ರಚಿಸಲಾಗುತ್ತಿದೆ ಎಂಬ ಭಾವನೆಯನ್ನು ಅದು ಮೂಡಿಸುತ್ತಿದೆ’ ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಅರುಣ್ ಜೇಟ್ಲಿ ಟೀಕಿಸಿದ್ದಾರೆ.ರಾಷ್ಟ್ರಪತಿ ಅವರ ಭಾಷಣಕ್ಕೆ ವಂದನೆ ಸಲ್ಲಿಸಿ ಮಾತನಾಡಿದ ಅವರು, ಪ್ರಧಾನಿ ಅವರು ಅಪ್ರಾಮಾಣಿಕ ಸರ್ಕಾರದ ಪ್ರಾಮಾಣಿಕ  ನಾಯಕ ಎಂದರು.ಎಡಪಕ್ಷಗಳಿಂದಲೂ ಟೀಕೆ:  ಸುಗಮ ಸಂಸತ್ ಕಲಾಪಕ್ಕಾಗಿ ಜೆಪಿಸಿ ರಚನೆಯನ್ನು ಒಪ್ಪಿಕೊಳ್ಳಲಾಗಿದೆ ಎಂಬ ಪ್ರಧಾನಿ ಅವರ ಹೇಳಿಕೆ ಬಗ್ಗೆ ಎಡಪಕ್ಷಗಳು ರಾಜ್ಯ ಸಭೆಯಲ್ಲಿ   ಕಿಡಿ ಕಾರಿದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry