ಒತ್ತಡಕ್ಕೆ ಸಿಲುಕಿ ಆತ್ಮತತ್ವ ಮರೆಯದಿರಿ

7

ಒತ್ತಡಕ್ಕೆ ಸಿಲುಕಿ ಆತ್ಮತತ್ವ ಮರೆಯದಿರಿ

Published:
Updated:

ಮೈಸೂರು: `ಪ್ರಾಪಂಚಿಕ ಒಡನಾಟದಿಂದ ಮನುಷ್ಯ ತನ್ನೊಳಗಿನ ಆತ್ಮತತ್ವವನ್ನು ಮರೆಯುತ್ತಿದ್ದಾನೆ. ಪ್ರತಿಯೊಬ್ಬರು ಆತ್ಮತತ್ವದ ದಿವ್ಯದರ್ಶನ ಪಡೆದುಕೊಳ್ಳಬೇಕು~ ಎಂದು ರಾಮಕೃಷ್ಣ ಆಶ್ರಮದ ಸ್ವಾಮಿ ಸುರೇಶಾನಂದಜಿ ಇಲ್ಲಿ ಕರೆ ನೀಡಿದರು.ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ ಸೋಮವಾರ ನಡೆದ `ವಿವೇಕ ಪ್ರಭ ಭಕ್ತ ಸಮಾವೇಶ-2011~ವನ್ನು ಉದ್ಘಾಟಿಸಿ ಮಾತನಾಡಿದರು.`ಶರೀರ, ಮನಸ್ಸು, ಚೈತನ್ಯದ ಜೊತೆಗೆ ಆತ್ಮವು ಇದೆ. ಇದರ ಹಿಂದಿನ ತತ್ವವನ್ನು ಅರಿಯಬೇಕು. ಇಂದ್ರಿಯ ನಿಗ್ರಹಿಸಬೇಕು. ಜಗತ್ತಿನಲ್ಲಿ ಮನುಷ್ಯ ಅತಿ ಬುದ್ಧಿವಂತ. ಆದರೆ ಮನುಷ್ಯನನ್ನು ಹಿಂದೆ ಪ್ರಾಣಿ ಎಂದೇ ಕರೆಯಲಾ ಗುತ್ತಿತ್ತು. ಆದರೆ ಬುದ್ಧಿಶಕ್ತಿ ಬೆಳೆ ಯುತ್ತಾ ಮನುಷ್ಯನ ವಿಚಾರಧಾರೆಗಳು ಬದಲಾದವು. ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಿ ಮಾನವ ಎತ್ತರಕ್ಕೆ ಬೆಳೆದರೂ ಅಧ್ಯಾತ್ಮ ವನ್ನು ಬಿಡಬಾರದು. ಜೀವ ದಲ್ಲಿ ಅಧ್ಯಾತ್ಮ ಅಳವಡಿಸಿಕೊಂಡರೆ ಜೀವನದಲ್ಲಿ ನೆಮ್ಮದಿ, ಮುಕ್ತಿ ದೊರಕುತ್ತದೆ~ ಎಂದು ಹೇಳಿದರು.ಆಂಧ್ರಪ್ರದೇಶ ಕಡಪ ರಾಮಕೃಷ್ಣ ಆಶ್ರಮದ ಸ್ವಾಮಿ ಆತ್ಮವಿದಾನಂದಜಿ ಮಾತನಾಡಿ, `2000ನೇ ಇಸವಿಯಲ್ಲಿ `ವಿವೇಕ ಪ್ರಭ~ ಮಾಸಿಕ ಪತ್ರಿಕೆಯನ್ನು ಆರಂಭಿಸಲಾಯಿತು. ಆರಂಭದಲ್ಲಿ 13 ಸಾವಿರ ಪತ್ರಿಕೆಗಳನ್ನು ಮುದ್ರಣ ಮಾಡಲಾಗಿತ್ತು. 12 ವರ್ಷಗಳ ನಂತರ ಇದೀಗ ಇದರ ಪ್ರಸಾರ ಸಂಖ್ಯೆ 28 ಸಾವಿರಕ್ಕೆ ಹೆಚ್ಚಿದೆ~ ಎಂದು ಹೇಳಿದರು.`ಆಂಧ್ರದಲ್ಲಿ `ರಾಮಕೃಷ್ಣ ಪ್ರಭ~ ಪತ್ರಿಕೆಯು 16 ಸಾವಿರ ಪ್ರಸಾರ ಸಂಖ್ಯೆಯೊಂದಿಗೆ ಆರಂಭವಾಯಿತು. ಇದೀಗ 96 ಸಾವಿರಕ್ಕೆ ಪ್ರಸಾರ ಏರಿದೆ. ಮೈಸೂರಿನಲ್ಲಿ ಆರಂಭವಾದ ವಿವೇಕ ಪ್ರಭ ಆಂಧ್ರಪ್ರದೇಶದ ಪತ್ರಿಕೆಯ ಪ್ರಸಾರ ಸಂಖ್ಯೆಯನ್ನು ಮೀರಿಸಬೇಕಿದೆ. ಹೆಚ್ಚು ಪುಟಗಳ ಸಂಖ್ಯೆಯ ಪತ್ರಿಕೆಗಳನ್ನು ಓದಲು ಜನರು ಇಚ್ಛಿಸುವುದಿಲ್ಲ.ಹಾಗಾಗಿ 40 ಪುಟಗಳ ಸುಂದರವಾದ ವಿವೇಕ ಪ್ರಭ ಪತ್ರಿಕೆಗೆ ಓದುಗರ ಸಂಖ್ಯೆ ಹೆಚ್ಚು ಇದ್ದಾರೆ~ ಎಂದು ತಿಳಿಸಿದರು.ಪೊನ್ನಂಪೇಟೆ ರಾಮಕೃಷ್ಣ ಆಶ್ರಮದ ಜಗದಾತ್ಮನಂದಜಿ, ಸ್ವಾಮಿ ಮುಕ್ತಿದಾನಂಜಿ, ಸ್ವಾಮಿ ತ್ಯಾಗೀಶ್ವರಾನಂದಜಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry