ಒತ್ತಡದಲ್ಲಿ ಮುಂಬೈ ಇಂಡಿಯನ್ಸ್

7

ಒತ್ತಡದಲ್ಲಿ ಮುಂಬೈ ಇಂಡಿಯನ್ಸ್

Published:
Updated:

ಕೇಪ್‌ಟೌನ್ (ಪಿಟಿಐ): ಮೊದಲ ಪಂದ್ಯದಲ್ಲಿ ಸೋಲು ಅನುಭವಿಸಿರುವ ಮುಂಬೈ ಇಂಡಿಯನ್ಸ್ ಮತ್ತು    ಯಾರ್ಕ್‌ಷೈರ್ ತಂಡಗಳು ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಗುರುವಾರ ಪರಸ್ಪರ ಎದುರಾಗಲಿವೆ.ಹರಭಜನ್ ಸಿಂಗ್ ನೇತೃತ್ವದ ಮುಂಬೈ ಮೊದಲ ಪಂದ್ಯದಲ್ಲಿ ಹೈವೆಲ್ಡ್ ಲಯನ್ಸ್ ಎದುರು ಪರಾಭವಗೊಂಡಿದ್ದರೆ, ಯಾರ್ಕ್‌ಷೈರ್ ತಂಡ ಸಿಡ್ನಿ  ಕೈಯಲ್ಲಿ ಸೋಲು ಅನುಭವಿಸಿತ್ತು. ಆದ್ದರಿಂದ ಗೆಲುವಿನ ಹಾದಿಗೆ ಮರಳುವ ವಿಶ್ವಾಸದೊಂದಿಗೆ ಉಭಯ ತಂಡಗಳು ಇಂದು ಕಣಕ್ಕಿಳಿಯಲಿವೆ.ಲಯನ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ತಂಡ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿತ್ತು. ಆದರೆ ಬೌಲರ್‌ಗಳು ಸಮರ್ಥ ದಾಳಿ ನಡೆಸುವಲ್ಲಿ ವಿಫಲರಾಗಿದ್ದರು. ಇದರಿಂದ ಸೋಲು ಎದುರಾಗಿತ್ತು. ನಾಯಕ ಹರಭಜನ್ ಮತ್ತು ಪ್ರಗ್ಯಾನ್ ಓಜಾ ಹೆಚ್ಚಿನ ರನ್ ಬಿಟ್ಟುಕೊಟ್ಟಿದ್ದರು.ಲಸಿತ್ ಮಾಲಿಂಗ ಹಾಗೂ ಮಿಷೆಲ್ ಜಾನ್ಸನ್ ತಕ್ಕಮಟ್ಟಿಗೆ ಉತ್ತಮ ಪ್ರದರ್ಶನ ನೀಡಿದ್ದರು. ಆದರೆ ಅವರಿಗೆ ಇತರರಿಂದ ಸೂಕ್ತ ಬೆಂಬಲ ಲಭಿಸಲಿಲ್ಲ. ಈ ಕಾರಣ ಬೌಲಿಂಗ್ ವಿಭಾಗದಲ್ಲಿ ಕೆಲವೊಂದು ಹೊಸ ಯೋಜನೆಗಳನ್ನು ರೂಪಿಸುವ ಅನಿವಾರ್ಯತೆ ಮುಂಬೈಗೆ ಎದುರಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry