ಒತ್ತಡದಲ್ಲೇ ಸಾಧನೆ ಮಾಡಿ: ಮುರುಘಾ ಶರಣರು

7

ಒತ್ತಡದಲ್ಲೇ ಸಾಧನೆ ಮಾಡಿ: ಮುರುಘಾ ಶರಣರು

Published:
Updated:

ಹಾವೇರಿ: `ಮಾನಸಿಕ ತೋಳಲಾಟಗಳು ಬುದ್ಧ, ಬಸವ, ಅಂಬೇಡ್ಕರ, ಮಹಾತ್ಮ ಗಾಂಧೀಜಿ ಅಂತಹ ಅನೇಕ ಮಹಾನ್ ವ್ಯಕ್ತಿಗಳನ್ನು ಬಿಟ್ಟಿಲ್ಲ. ತಮಗೆ ಎದುರಾದ ತೊಳಲಾಟವನ್ನು ಮೀರಿ ಅದ್ವಿತೀಯ ಸಾಧನೆಗಳನ್ನು ಮಾಡಿದ್ದರಿಂದಲೇ ಅವರ ಸಾಧನೆ ಈವರೆಗೆ ನೆನಪಾಗಿಯೇ ಉಳಿದಿವೆ~ ಎಂದು ಚಿತ್ರದುರ್ಗದ ಶಿವಮೂರ್ತಿ ಮುರುಘಾ ಶರಣರು ಹೇಳಿದರು.ನಗರದ ಹೊರವಲಯದಲ್ಲಿರುವ ಕ.ವಿ.ವಿ. ಸ್ನಾತಕೋತ್ತರ ಕೇಂದ್ರದಲ್ಲಿ ಶರಣ ಸಂಸ್ಕೃತಿ ಉತ್ಸವ-2012 ಅಂಗವಾಗಿ ಆಯೋಜಿಸಿದ ಚಿಂತನ ಗೋಷ್ಠಿಯನ್ನು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ತಾಕಾಲಾಟಗಳ ಒಳಗಡೆಯೇ ನಾವು ಬದುಕಿ ಬಾಳಿ ತೋರಿಸಬೇಕು. ಅಂದಾಗ ಮಾತ್ರ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಮಾನಸಿಕ ತೋಳಲಾಟದಿಂದ ಹೊರ ಬರಬೇಕಾದರೆ ತರಗತಿಯ ಒಳಗೆ ಬಂದಾಗ ಮನೆಯ ಮತ್ತು ಇತರ ವಿಷಯಗಳ ಬಗ್ಗೆ ಯೋಚಿಸಬಾರದು. ನಮ್ಮ ಆಲೋಚನೆಗಳು ನಮ್ಮ ಬದುಕನ್ನು ಆಳಬೇಕು ಎಂದು ತಿಳಿಸಿದರು.

 

ಒತ್ತಡದ ಜೀವನ ನಡೆಸುತ್ತಲೇ ಯುವಕರು ಹೊಸ ಹೊಸ ವಿಚಾರಗಳ ಬಗ್ಗೆ ಚಿಂತನೆ ನಡೆಸುತ್ತಾ ಇರಬೇಕು. ಆಗಲೇ ಕ್ರಿಯಾಶೀಲವಾಗಿ ಇರಲು ಸಾಧ್ಯವಾಗುತ್ತದೆ. ಮಾನಸಿಕ ತೊಳಲಾಟಳು ವಿದ್ಯಾರ್ಥಿಗಳು ಕ್ರಿಯಾಶೀಲವಾಗಿ ಯೋಚನೆ ಮಾಡಲು ಸಹಾಯಕವಾಗುತ್ತದೆ ಎಂದು ಅವರ ಈ ಸಂದರ್ಭದಲ್ಲಿ ಹೇಳದರು.ಇಂದಿನ ಯುವ ಜನಾಂಗದಲ್ಲಿ ಆದರ್ಶ ವ್ಯಕ್ತಿತ್ವವನ್ನು ರೂಪಿಸಿದರೆ ಮಾತ್ರ ಆದರ್ಶ ಸಮಾಜ ನಿರ್ಮಾಣವಾಗಲು ಸಾಧ್ಯವಾಗುತ್ತದೆ ಎಂದು ಹೇಳಿದ ಅವರು, ಅಂತರ್ ಜಾತಿ ವಿವಾಹ ಕುರಿತ ವಿದ್ಯಾರ್ಥಿಯೊಬ್ಬನ ಪ್ರಶ್ನೆಗೆ ಜಾತ್ಯತೀತ ಸಮಾಜ ನಿರ್ಮಾಣಕ್ಕೆ ಅಂತರ್ ಜಾತಿ ವಿವಾಹಗಳು ಪೂರಕ ಎಂದು ಅಭಿಪ್ರಾಯಪಟ್ಟರು.ಇದೇ ಸಂದರ್ಭದಲ್ಲಿ ಮುರುಘಾ ಶರಣರನ್ನು ಕ.ವಿ.ವಿ. ಸ್ನಾತಕೋತ್ತರ ಕೇಂದ್ರದ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಹೊಸಮಠದ ಬಸವಶಾಂತಲಿಂಗ ಶ್ರೀಗಳು, ಸ್ನಾತಕೋತ್ತರ ಕೇಂದ್ರ ಆಡಳಿತಾಧಿಕಾರಿ ಡಾ. ಟಿ.ಎಂ.ಭಾಸ್ಕರ ಹಾಜರಿದ್ದರು.ಉಪನ್ಯಾಸಕರಾದ ಎಲ್.ಎಸ್.ಪಾಟೀಲ, ಅಂಬಾ ಪ್ರಸಾದ ಕುಂಟೆ, ಎನ್.ಎಸ್. ಪಾಟೀಲ, ಅನಿತಾ ಹಾಲಮತ, ಕೀರ್ತಿ, ಪ್ರಿಯದರ್ಶಿನಿ, ಗೀತಾ ಬೆಳಗಾವಿ ಮತ್ತಿತರರು ಹಾಜರಿದ್ದರು.ಸ್ನಾತಕೋತ್ತರ ಕೇಂದ್ರದ ಆಡಳಿತಾಧಿಕಾರಿ ಡಾ.ಟಿ.ಎಂ.ಭಾಸ್ಕರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ನೇಹಾ ಪ್ರಾರ್ಥಿಸಿದರು. ಕೆ.ಎಸ್.ಇಟಗಿಮಠ ನಿರೂಪಿಸಿದರು. ಲಿಂಗರಾಜ ಪಾಟೀಲ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry