ಒತ್ತಡ ನಿವಾರಣೆಗೆ ಯೋಗ ಅಗತ್ಯ

7

ಒತ್ತಡ ನಿವಾರಣೆಗೆ ಯೋಗ ಅಗತ್ಯ

Published:
Updated:

ಬಳ್ಳಾರಿ: ಮಾನಸಿಕ ಒತ್ತಡ ನಿಯಂತ್ರಿಸಿ ಮನ ಶಾಂತಿ ಪಡೆಯಲು ಪ್ರತಿಯೊಬ್ಬರು ಯೋಗ ಅಳವಡಿಸಿಕೊಳ್ಳುವಂತೆ ವಿಮ್ಸ್‌ನ ನಿರ್ದೇಶಕ ಡಾ, ದೇವಾನಂದ್ ಸಲಹೆ ಮಾಡಿದರು. ನಗರದ ಬಿಡಿಎಎ ಮೈದಾನದಲ್ಲಿ ಬುಧವಾರ ಬೆಳಗಿನ ಜಾವ ಎರಡನೇ ದಿನ  ಏರ್ಪಡಿಸಲಾಗಿದ್ದ ಉಚಿತ ಯೋಗ ಶಿಬಿರದಲ್ಲಿ ಅವರು ಮಾತನಾಡಿದರು.

ನಿದ್ರಾಹೀನತೆ, ಜ್ಞಾಪಕಶಕ್ತಿ ಕೊರತೆ ಮತ್ತು ಆಹಾರ ಪಚನವಾಗದಿರುವ ಸಮಸ್ಯೆಗೆ ಯೋಗದಿಂದ ಮುಕ್ತಿ ದೊರೆಯಲಿದೆ ಎಂದರು,‘ಇಂದಿನ ಅವಸರದ ಜೀವನಕ್ಕೆ ಅಂಟಿಕೊಂಡಿರುವ ಜನರಿಗೆ ತಿಳಿಯದೇ ಅನೇಕ ರೋಗಗಳು ದೇಹವನ್ನು ಆವರಿಸುತ್ತಿವೆ. ಸರ್ವ ರೋಗದಿಂದ ಮುಕ್ತಿ ಪಡೆಯಲು   ಜೀವನದಲ್ಲಿ ಯೋಗ ಅಳವಡಿಸಿಕೊಳ್ಳುವುದು ಒಂದೇ ದಾರಿ’ ಎಂದು ಕಲ್ಯಾಣಸ್ವಾಮಿ ಸ್ವಾಮೀಜಿ ತಿಳಿಸಿದರು.  ಚಿದಾನಂದ ಸ್ವಾಮೀಜಿ, ಪತಂಜಲಿ ಯೋಗ ಸಮಿತಿ ಭವರಲಾಲ್ ಆರ್ಯ, ಆಯುಕ್ತ ಎಂ.ತಿಮ್ಮಪ್ಪ, ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಜಿ.ಆರ್.ವಸ್ತ್ರದ ಇತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry