ಮಂಗಳವಾರ, ಜೂನ್ 22, 2021
29 °C

ಒತ್ತುವರಿ ಸಮಸ್ಯೆ; ಅರಣ್ಯ ಸಚಿವರಿಗೆ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಳಸ: ಹೋಬಳಿಯ ಕೃಷಿಕರಿಗೆ ಇಕ್ಕಟ್ಟು ತಂದೊಡ್ಡಿರುವ ಅರಣ್ಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ಬಿಜೆಪಿ ಕಾರ್ಯಕರ್ತರು ಅರಣ್ಯ ಸಚಿವರನ್ನು ಒತ್ತಾಯಿಸಿದರು.ಪಟ್ಟಣದ ಪಕ್ಷದ ಕಚೇರಿಯಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಕಾರ್ಯಕರ್ತರು ಅರಣ್ಯ ಸಚಿವ ಸಿ.ಪಿ.ಯೋಗೀಶ್ವರ್‌ಗೆ ಈ ಬಗ್ಗೆ ಮನವಿ ಸಲ್ಲಿಸಿದರು.ಹೋಬಳಿಯ ಬಹುತೇಕ ಕೃಷಿಕರು ಅರಣ್ಯದ ಅಂಚಿನಲ್ಲಿ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಒತ್ತುವರಿ ಬಗ್ಗೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುವ ಮುನ್ನ ಅವರ ಹಿತ ಕಾಯಬೇಕು ಎಂದು ಕಾರ್ಯಕರ್ತರು ಕೋರಿದರು.ಆನಂತರ ಪಟ್ಟಣದ ಮುಖ್ಯ ರಸ್ತೆಯಲ್ಲಿ ಸಚಿವರು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುನೀಲ್ ಕುಮಾರ್ ಪರವಾಗಿ ಮತ ಯಾಚನೆ ಮಾಡಿದರು.ಕಳಸಕ್ಕೆ ಇಂದು ಸುನೀಲ್ ಕುಮಾರ್-ಈಶ್ವರಪ್ಪ:  ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುನೀಲ್ ಕುಮಾರ್ ಶುಕ್ರವಾರ ಹೋಬಳಿಯಾದ್ಯಂತ ಪ್ರವಾಸ ಮಾಡಲಿದ್ದಾರೆ. ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಮತ್ತು ಶಾಸಕ ಎಂ.ಪಿ.ಕುಮಾರಸ್ವಾಮಿ ಸುನೀಲ್ ಜತೆಗೆ ಪ್ರವಾಸ ಮಾಡಲ್ದ್ದಿದ್ದಾರೆ.        

ಬೆಳಿಗ್ಗೆ 9 ಗಂಟೆಗೆ ಕುದುರೆಮುಖದಲ್ಲಿ ಸಭೆ ನಡೆಯಲಿದ್ದು 9.30ಕ್ಕೆ ಸಂಸೆಯಲ್ಲಿ, 10.30ಕ್ಕೆ ಕಳಸದಲ್ಲಿ ಮತ್ತು 12 ಗಂಟೆಗೆ ಬಾಳೆಹೊಳೆಯಲ್ಲಿ ಮತಯಾಚನೆ ಮಾಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.  

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.