ಒಪೆಕ್ ಆಸ್ಪತ್ರೆ ವ್ಯವಸ್ಥೆ: ಆಕ್ರೋಶ

7

ಒಪೆಕ್ ಆಸ್ಪತ್ರೆ ವ್ಯವಸ್ಥೆ: ಆಕ್ರೋಶ

Published:
Updated:

ರಾಯಚೂರು: ಆರ್‌ಟಿಪಿಎಸ್ ನ 2ನೇ ಘಟಕದಲ್ಲಿ ಬುಧವಾರ ಅಗ್ನಿ ಆಕಸ್ಮಿಕದಲ್ಲಿ ತೀವ್ರ ಗಾಯಗೊಂಡ ಜಿಂದಾವಲಿ ಎಂಬ ಗುತ್ತಿಗೆಯಾಧಾರಿತ ನೌಕರನನ್ನು ನಗರದ ಒಪೆಕ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಕರೆ ತಂದಾಗ ವೈದ್ಯರಿಲ್ಲದುದರಿಂದ ಹೆಚ್ಚಿನ ಚಿಕಿತ್ಸೆಗೆ ಹೈದಾರಾಬಾದ್‌ಗೆ ಕರೆದೊಯ್ಯಬೇಕಾಯಿತು.ಅಗ್ನಿ ಆಕಸ್ಮಿಕ ಸಂಭವಿಸಿದಾಗ ನರಸಪ್ಪ ಮತ್ತು ಜಿಂದಾವಲಿ ತೀವ್ರವಾಗಿ ಗಾಯಗೊಂಡಿದ್ದರು. ಅವರಿಗೆ ಪ್ರಥಮ ಚಿಕಿತ್ಸೆಯನ್ನು ಶಕ್ತಿನಗರ ಕೆಪಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಒಪೆಕ್ ಆಸ್ಪತ್ರೆಗೆ ಕರೆ ತಂದಿದ್ದರು.ಒಪೆಕ್ ಆಸ್ಪತ್ರೆಯ ಡಾ. ಫಕ್ಕೀರಪ್ಪ ಆಗ ಕರ್ತವ್ಯದಲ್ಲಿದ್ದರು. `ಶೇ 90ರಷ್ಟು ಗಾಯವಾಗಿದೆ. ಪ್ಲಾಸ್ಟಿಕ್ ಸರ್ಜರಿ ಸ್ಪೆಷಲಿಸ್ಟ್ ಬೇಕು. ಇಲ್ಲಿನ ಸ್ಪೆಷಲಿಸ್ಟ್ ಡಾ. ಅಬ್ದುಲ್ ಅಜೀಮ್ ರಜೆ ಮೇಲಿದ್ದಾರೆ~ ಎಂದು ಅವರು ಹೇಳಿದರು.ಕೊನೆಗೆ ಹೈದಾರಾಬಾದ್‌ಗೆ ಕರೆದೊಯ್ಯಲು ನಿರ್ಧರಿಸಿದಾಗ,  ಜಿಂದಾವಲಿ ಸಂಬಂಧಿಕರು, ಆರ್‌ಟಿಪಿಎಸ್ ನೌಕರರು, ಗುತ್ತಿಗೆದಾರ ಆಕ್ರೋಶ ವ್ಯಕ್ತಪಡಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry