ಒಬಾಮ ಆಡಳಿತದಲ್ಲಿ ಭಾರತೀಯರ ನೇಮಕ

7

ಒಬಾಮ ಆಡಳಿತದಲ್ಲಿ ಭಾರತೀಯರ ನೇಮಕ

Published:
Updated:

ವಾಷಿಂಗ್ಟನ್ (ಪಿಟಿಐ): ಒಬಾಮ ಆಡಳಿತವು ಭಾರತೀಯ ಮೂಲದ ಸ್ಮಿತಾ ಸಿಂಗ್ ಅವರನ್ನು ಅಮೆರಿಕದ ಜಾಗತಿಕ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಿದೆ.

`ಜಾಗತಿಕ ಅಭಿವೃದ್ಧಿಗೆ ಸಂಬಂಧಿಸಿದ ನೀತಿಗಳು ಹಾಗೂ ಆಚರಣೆಗಳ ಕುರಿತು ಈ ಮಂಡಳಿಯು ಅಮೆರಿಕದ ಅಧ್ಯಕ್ಷರು ಹಾಗೂ ಇತರ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಿದೆ' ಎಂದು ಶ್ವೇತಭವನ ತಿಳಿಸಿದೆ.1998ರಿಂದ 2001ರವರೆಗೆ ಸ್ಮಿತಾ ಅವರು `ಹಾರ್ವರ್ಡ್ ಅಕಾಡೆಮಿ ಫಾರ್ ಇಂಟರ್‌ನ್ಯಾಷನಲ್ ಆಂಡ್ ಏರಿಯಾ ಸ್ಟಡೀಸ್'ನಲ್ಲಿ ವಿದ್ಯಾರ್ಥಿನಿಯಾಗಿದ್ದರು.

ಅಲ್ಲದೇ ವಿಶ್ವಬ್ಯಾಂಕ್ ಹಾಗೂ ಆಫ್ರಿಕಾಕ್ಕೆ ವಿಶ್ವಸಂಸ್ಥೆಯ ಆರ್ಥಿಕ ಸಲಹೆಗಾರರಾಗಿಯೂ ಕೆಲಸ ಮಾಡಿದ್ದರು.ಭಾರತೀಯನಿಗೆ ಪ್ರಶಸ್ತಿಐಬಿಎಂ ಸಂಶೋಧಕ, ಭಾರತೀಯ ಮೂಲದ ರಂಗಸ್ವಾಮಿ ಶ್ರೀನಿವಾಸನ್ ಅವರನ್ನು ತಾಂತ್ರಿಕ ಆವಿಷ್ಕಾರಕ್ಕೆ ನೀಡುವ ಅಮೆರಿಕ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಅಧ್ಯಕ್ಷ ಬರಾಕ್ ಒಬಾಮ ಅವರು ಈ ಪ್ರಶಸ್ತಿಗೆ ಇನ್ನೂ 12 ಸಂಶೋಧಕರನ್ನು ಆಯ್ಕೆ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry