ಒಬಾಮ ಪ್ರಚಾರ ಕಚೇರಿಗೆ ಗುಂಡು (ಸಂಕ್ಷಿಪ್ತ ಸುದ್ದಿ:)

7

ಒಬಾಮ ಪ್ರಚಾರ ಕಚೇರಿಗೆ ಗುಂಡು (ಸಂಕ್ಷಿಪ್ತ ಸುದ್ದಿ:)

Published:
Updated:

ಒಬಾಮ ಪ್ರಚಾರ ಕಚೇರಿಗೆ ಗುಂಡುವಾಷಿಂಗ್ಟನ್ (ಪಿಟಿಐ):  ಅಪರಿಚಿತರು ಹಾರಿಸಿದ ಗುಂಡೊಂದು ಅಮೆರಿಕದ ಕೊಲೆರೆಡೊ ರಾಜ್ಯದ ಡೆನ್ವರ್‌ನಲ್ಲಿರುವ ಅಧ್ಯಕ್ಷ ಒಬಾಮ ಅವರ ಚುನಾವಣಾ ಪ್ರಚಾರ ಕಚೇರಿಯ ಕಿಟಕಿಗೆ ತಗುಲಿದೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.ಈ ಘಟನೆ ಶುಕ್ರವಾರ ಸಂಭವಿಸಿದೆ ಎಂದಿರುವ ಡೆನ್ವರ್ ಪೊಲೀಸರು ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಘಟನೆಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಕೊಲೆರೆಡೊದಲ್ಲಿ ಒಬಾಮ ಅವರ ಚುನಾವಣಾ ಪ್ರಚಾರಕ್ಕಾಗಿ 30 ಕಚೇರಿಗಳಿವೆ.ಹೆಲಿಕಾಪ್ಟರ್ ದುರಂತ: 3 ಬಲಿ
ವಾಷಿಂಗ್ಟನ್ (ಐಎಎನ್‌ಎಸ್): ಅಮೆರಿಕದ ಟೆಕ್ಸಾಸ್ ರಾಜ್ಯದ ವಾಯುವ್ಯ ಭಾಗದಲ್ಲಿರುವ ಕೆಂಡಲ್ ಪ್ರಾಂತ್ಯದಲ್ಲಿ ಸಂಭವಿಸಿದ ಹೆಲಿಕಾಪ್ಟರ್ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಅಪಘಾತ: ಮೂವರ ಸಾವು
ಮಾಸ್ಕೊ (ಎಪಿ): ಉಕ್ರೇನ್‌ನ ಕಪ್ಪು ಸಮುದ್ರದ ಬಳಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಮೂರು ಮಂದಿ ನೌಕಾ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಶನಿವಾರ ರಷ್ಯಾದ ರಕ್ಷಣಾ ಸಚಿವಾಲಯ ಹೇಳಿದೆ.ರಷ್ಯಾದ ನೌಕಾಪಡೆಗೆ ಸೇರಿದ ಬೆರಿಹೇವ್ ಬಿಇ-12 ದ್ವಿ ಎಂಜಿನ್ ಟರ್ಬೊಪ್ರಾಪ್ ವಿಮಾನ ಉಕ್ರೇನ್‌ನ ಕ್ರಿಮೀನ್ ಪೆನ್ನಿಸ್ಯುಲ ನೆಲೆಯ ಬಳಿ ಅಪಫಾತಕ್ಕೊಳಗಾಗಿದೆ.

 

ವಿಮಾನದಲ್ಲಿದ್ದ ನಾಲ್ವರು ನೌಕಾ ಸಿಬ್ಬಂದಿ ಪೈಕಿ ಮೂವರು ಮೃತಪಟ್ಟಿದ್ದು, ಬದುಕುಳಿದಿರುವವನ ಸ್ಥಿತಿ ಗಂಭೀರವಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry