ಒಬಾಮ ವಿರುದ್ಧ ಜಿಂದಾಲ್ ವಾಗ್ದಾಳಿ
ವಾಷಿಂಗ್ಟನ್ (ಐಎಎನ್ಎಸ್): ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ವಿರುದ್ಧ ಭಾರತೀಯ ಮೂಲದ ಲೂಸಿಯಾನ ಗವರ್ನರ್ ಬಾಬಿ ಜಿಂದಾಲ್ ವಾಗ್ದಾಳಿ ನಡೆಸಿದ್ದು, ಅವರೊಬ್ಬ `ಅಸಮರ್ಥ~ ಅಧ್ಯಕ್ಷ ಎಂದು ಖಂಡಿಸಿದ್ದಾರೆ.
ಜಿಮ್ಮಿ ಕಾರ್ಟರ್ ನಂತರ ಅಮೆರಿಕ ಕಂಡ ಅತಿ ಉದಾರವಾದಿ ಹಾಗೂ ಅದಕ್ಷ ಅಧ್ಯಕ್ಷರು ಇವರಾಗಿದ್ದಾರೆ ಎಂದು ಜಿಂದಾಲ್ ಟೀಕಿಸಿದ್ದಾರೆ.
ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಮಿಟ್ ರೊಮ್ನಿ ಪರ ಹೇಳಿಕೆ ನೀಡಿರುವ ಜಿಂದಾಲ್, ತಮ್ಮ ರಾಜಕೀಯ ಸಿದ್ಧಾಂತ, ಸಾಧನೆ ಆಧಾರದ ಮೇಲೆ ಮತ ಗಳಿಸಲು ಸಾಧ್ಯವಿಲ್ಲದ ಒಬಾಮ, ರೊಮ್ನಿ ಹೆಸರು ಕೆಡಿಸುತ್ತಿದ್ದಾರೆ ಎಂದು ದೂರಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.