ಬುಧವಾರ, ಮೇ 19, 2021
24 °C

ಒಬಿಸಿ ವಿದ್ಯಾರ್ಥಿಗಳಿಗೆ ಸೌಲಭ್ಯ ಒದಗಿಸಿ

ವೈ. ಯಮುನೇಶ್, ಹೊಸಪೇಟೆ Updated:

ಅಕ್ಷರ ಗಾತ್ರ : | |

ನಾಡಿನ ಸಂಸ್ಕೃತಿ, ಕನ್ನಡ ಭಾಷೆಯ ಸಂಶೋಧನೆ, ಬೆಳವಣಿಗೆಯ ಉದ್ದೆೀಶದಿಂದ ಎರಡು ದಶಕಗಳ ಹಿಂದೆ ಅಸ್ತಿತ್ವಕ್ಕೆ ಬಂದ ಹಂಪಿಯ ಕನ್ನಡ ವಿಶ್ವವಿದ್ಯಾಲಯವು ಹಿಂದುಳಿದ ಜಾತಿ-ಸಮುದಾಯಗಳ ಬಗ್ಗೆ ಮಲತಾಯಿ ಧೋರಣೆ ತಳೆದಿರುವುದು ಖಂಡನೀಯ.

 

ವಿಶ್ವವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿ ನೇಮಕಾತಿಯಲ್ಲಿ  ಒ.ಬಿ.ಸಿ. ವರ್ಗಕ್ಕೆ ಸರ್ಕಾರದ ನಿಯಮಾನುಸಾರ ಮೀಸಲಾತಿ ನೀಡದಿರುವುದು ಒಂದುಕಡೆಯಾದರೆ, ರಾಜ್ಯದ ವಿವಿಧ ಪ್ರದೇಶಗಳಿಂದ ಇಲ್ಲಿಗೆ ಅಧ್ಯಯನ, ಸಂಶೋಧನೆಗೆ ಬರುವ ವಿದ್ಯಾರ್ಥಿಗಳಿಗೆ ಕ್ಯಾಂಪಸ್‌ನಲ್ಲಿ ಹೆಸರಿಗೆ ಮಾತ್ರ ಹಾಸ್ಟೆಲ್ ಸೌಲಭ್ಯ ಇದ್ದು, ಸೂಕ್ತ ಸೌಲಭ್ಯ ಕಲ್ಪಿಸದೇ ಇರುವುದು ದಮನಿತ ಜಾತಿಗಳ ಬಗ್ಗೆ ವಿಶ್ವವಿದ್ಯಾಲಯದ ನಿಷ್ಕಾಳಜಿಗೆ ಸಾಕ್ಷಿಯಾಗಿದೆ.ಪ್ರತಿವರ್ಷ ಬೇರೆಬೇರೆ ಜಿಲ್ಲೆಗಳಿಂದ ಈ ಸಮುದಾಯದ ಅಭ್ಯರ್ಥಿಗಳು ಸ್ನಾತಕೋತ್ತರ ಪದವಿ, ಸಂಶೋಧನೆ, ಪಿಎಚ್.ಡಿ ಮಾಡಲು ಇಲ್ಲಿಗೆ ಆಗಮಿಸುತ್ತಾರೆ. ಆದರೆ ವಿವಿ ಕ್ಯಾಂಪಸ್ಸಿನಲ್ಲೇ ಉಳಿದು ಅಧ್ಯಯನ ಮಾಡಲು ಅಗತ್ಯವಾದ ಮೂಲಭೂತ ಸೌಲಭ್ಯಗಳಿಲ್ಲದೆ ನರಳಾಡುವಂತಾಗಿದೆ.  ಕ್ಯಾಂಪಸ್ಸಿನಲ್ಲೇ ಉಳಿಯಲು ಹಾಸ್ಟೆಲ್ ಕಟ್ಟಡವೇನೋ ಇದೆ.  ಆದರೆ ಪ್ರತಿ ತಿಂಗಳು ಕೊಠಡಿಯ ಬಾಡಿಗೆ, ಊಟ-ಉಪಹಾರದ ವೆಚ್ಚ ವಿದ್ಯಾರ್ಥಿಗಳೇ ಭರಿಸಬೇಕು.ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಸಮಸ್ಯೆಯ ಬಗೆಗೆ ವಿವಿ ಆಡಳಿತ ಇನ್ನಾದರೂ ಗಮನಹರಿಸಿ ಅವಶ್ಯ ಸೌಲಭ್ಯ ಕಲ್ಪಿಸಬೇಕಾಗಿ ವಿನಂತಿ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.