ಗುರುವಾರ , ಜೂನ್ 17, 2021
22 °C

ಒಬ್ಬರಿಗೆ ಲಡ್ಡು, ಇನ್ನೊಬ್ಬರಿಗೆ ಗಂಗಾಜಲ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಒಬ್ಬರಿಗೆ ಲಡ್ಡು, ಇನ್ನೊಬ್ಬರಿಗೆ ಗಂಗಾಜಲ!

ಒಬ್ಬ ಒಬ್ಬ ಒಬ್ಬ ಪರಮಾತ್ಮಾ.... ಮತ್ತೆ ಮತ್ತೆ ಮತ್ತೆ ಬರುತಾನೆ...  ಎಂದ ತೆಪರೇಸಿ ರಾಗವಾಗಿ. ಯಾರ್‌ದುಕೆ ಹೇಳ್ತೀಯ ತೆಪರೇಸಿ ಭೈ, ಯಡೂರಪ್ಪಾದುಕೆ ತಾನೆ ? ನಮ್ದುಕೂ ಎಲ್ಲ ಗೊತ್ತಾಗ್ತದೆ ಮಾಲೂಮ್? ಎಂದ ಚಾಂದು ನಗುತ್ತ. ಅಲೆ ಇವ್ನ, ಅದೆಂಗೆ ಗೊತ್ತಾತು ನಿಂಗೆ? ಹರಟೆಕಟ್ಟೆ ಸೇರಿದ ಮೇಲೆ ನೀನೂ ಚಾಲೂ ಆದೆ ಬಿಡು ಎಂದ ನಕ್ಕ ತೆಪರೇಸಿ, ಅಂತೂ ಯಡ್ಯೂರಪ್ಪ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡೋದು ಗ್ಯಾರಂಟಿ ಆದಂಗಾತಪ ಎಂದ. ಕೃಷ್ಣಯ್ಯ ಶೆಟ್ರು ಶಿವರಾತ್ರೀಲಿ ಗಂಗಾಜಲ ಹಂಚಿದಾಗ್ಲೇ ನಂಗೆ ಇದು ಗೊತ್ತಾಯ್ತು ಬಿಡ್ರಲೆ...  ಎಂದ ಗುಡ್ಡೆ. ಹೌದಾ? ಅದೆಂಗೆ?~ ಮಿಸ್ಸಮ್ಮ ಪ್ರಶ್ನಿಸಿದಳು. ಯಡ್ಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಇದೇ ಕೃಷ್ಣಯ್ಯಶೆಟ್ರು ಎಲ್ರಿಗೂ ತಿರುಪತಿ ಲಡ್ಡು ತಿನ್ನಿಸಿದ್ರು. ಈಗ ? ಸದಾನಂದಗೌಡ್ರ ಬಾಯಿಗೆ ಗಂಗಾಜಲ! ಮೇಲೇ ಗೊತ್ತಾಗಲ್ವಾ?

 ಅಂತೂ ಯಡ್ಯೂರಪ್ಪ ರಾಹುಲ್ ದ್ರಾವಿಡ್ ತರ ಗ್ರೇಟ್ ವಾಲ್ ಇದ್ದಂಗೆ ಕಣ್ರಲೆ, ಯಾರೂ ಅಷ್ಟು ಸುಲಭವಾಗಿ ಅವರ‌್ನ ಅಲ್ಲಾಡಿಸೋಕೆ ಆಗಲ್ಲ. ದ್ರಾವಿಡ್ ನಿವೃತ್ತಿ ಆಗಬಹುದು. ಆದ್ರೆ ಯಡ್ಯೂರಪ್ಪ ಅವರಿಗೆ ನಿವೃತ್ತಿ ಇಲ್ಲ. ಇನ್ನೊಂದ್ ಹತ್ತು ವರ್ಷ ಅವರು ಬ್ಯಾಟಿಂಗ್ ಮಾಡೇ ಮಾಡ್ತಾರೆ ನೋಡ್ತಿರು  ಎಂದ ತೆಪರೇಸಿ. ಯಡ್ಯೂರಪ್ಪ ಅವರಿಗೆ ಬೂದಿಯಿಂದ ಎದ್ದು ಬರೋ ಶಕ್ತಿ ಐತೆ ಕಣ್ರೋ, ಆದ್ರೆ ನಮ್ಮ ಗಣಿಧಣಿಗೆ ಇನ್ನೂ ದೂಳಿನಿಂದ ಎದ್ದು ಬರೋಕೆ ಆಗ್ತಾ ಇಲ್ಲ ನೋಡು. ಇದೇ ವ್ಯತ್ಯಾಸ...~ ಎಂದಳು ಮಿಸ್ಸಮ್ಮ. ಅದಿರ‌್ಲಿ, ಸದಾನಂದಗೌಡ್ರು ಮುಖ್ಯಮಂತ್ರಿ ಕುರ್ಚಿ ತಂಗಡ್ ಹೋಗಿ ಗಡ್ಕರಿ ಮನೇಲಿ ಇಟ್ ಬಂದಿದಾರಂತೆ? ನಮ್ ಮುಖ್ಯಮಂತ್ರಿ ಕುರ್ಚಿ ನಮಗೆ ಕೊಡಿ ಅಂತ ರೇಣುಕಾಚಾರ್ಯ, ಹರೀಶು, ಕೂಲಿಂಗ್ ಗ್ಲಾಸ್ ಬೇಳೂರು ಎಲ್ಲ ಗಲಾಟೆ ಮಾಡಿದ್ಕೆ ಕುರ್ಚಿ ನನ್ನತ್ರ ಇಲ್ಲ, ಗಡ್ಕರಿ ಮನೇಲಿ ಇಟ್ಟು ಬಂದಿದೀನಿ?, ಇಸ್ಕಾ ಹೋಗಿ ಅಂದ್ರಂತೆ... ಗುಡ್ಡೆ ಕತೆ ಹೊಸೆದ. ಯಡ್ಯೂರಪ್ಪ ಮೊದಲೆಲ್ಲ  ಆ ವರಿ, ಈ ವರಿ ಎಲ್ಲ ವರಿಗೂ ಒಂದೇ ಉತ್ತರ ಗಡ್ಕರಿ ಅಂತಿದ್ರು. ಈಗ ಎಲ್ಲ ವರಿಗೂ ಕಾರಣ ಗಡ್ಕರಿ ಅನ್ನಂಗಾಗೇತಿ ಅಲ್ವಾ? ರಾಜಕೀಯ ಅಂದ್ರೆ ಇದೇ. ದೋಸೆ ತಿರುವಿ ಹಾಕಿದಂಗೆ, ನಿನ್ನೆ ಆನೆ, ಇವತ್ತು ಸೈಕಲ್ಲು!   ಪರಮೇಶಿ ರಾಜಕೀಯ ವಿಶ್ಲೇಷಣೆ ಮಾಡಿದ. ಆಹಾ ಎಲ್ಲಿಂದೆಲ್ಲಿಗೆ ಹೋದ್ಯೋ ಪರಮೇಶಿ, ಕರ್ನಾಟಕದಿಂದ ಸೀದಾ ಉತ್ತರ ಪ್ರದೇಶಕ್ಕೆ ಹಾರಿದ್ಯಲ್ಲ..., ಹೌದೂ ಜನ ಅಲ್ಲಿ ಸೈಕಲ್‌ಗೆ ಓಟು ಹಾಕೋಕೆ ಏನು ಕಾರಣ?~ ದುಬ್ಬೀರ ಪ್ರಶ್ನಿಸಿದ. ಆನೆ ಸಾಕೋದು ಕಷ್ಟ ಅಂತ ಅವರಿಗೆ ಗೊತ್ತಾಗಿರಬೇಕು ಕಣ್ರೋ, ಮೇಲಾಗಿ ಪೆಟ್ರೋಲ್ ರೇಟು ದಿನಾದಿನ ಹಿಂಗೆ ಏರ‌್ತಾ ಹೋದ್ರೆ ಜೀವನ ನಡೆಸೋದು ಹೆಂಗೆ? ಸೈಕಲ್ಲಾದ್ರೆ ಚಕ್ರಕ್ಕೆ ಗಾಳಿ ತುಂಬಿಸ್ಕೊಂಡು ಹೊಂಟ್ರೆ ಮುಗೀತಪ. ದುಡ್ಡೂ ಉಳೀತತಿ, ಆರೋಗ್ಯಾನೂ ಚೆನ್ನಾಗಾಗ್ತತಿ ಅಲ್ವಾ?~ ಮಿಸ್ಸಮ್ಮ ಸಮಜಾಯಿಷಿ ನೀಡಿದಳು. ಅಲ್ಲ ಮಿಸ್ಸಮ್ಮ, ಅಲ್ಲಿ ಇಸ್ಸೈಕಲ್ ಪಕ್ಷದಾಗೆ ಸಿನ್ಮಾ ಹೀರೊಯಿನ್‌ಗೆ  ತೋರ‌್ಸಿ ಓಟ್ ತಗಂಡಿರ್‌ಬೋದಾ? ನಮ್ದುಕೆ ಅದೇ ಡೌಟು...~ ಎಂದ ಚಾಂದು. ನಿನ್ತೆಲಿ, ಸಿನಿಮಾ ಹೀರೊಯಿನ್‌ಗಳನ್ನ ತೋರಿಸಿಬಿಟ್ರೆ ಜನ ಓಟ್ ಹಾಕಿಬಿಡ್ತಾರಾ?~

 ನೈತೋ ಕರ್ನಾಟಕ್‌ಮೆ ಎಲ್ಲ ಪಾರ್ಟಿಗು ಸಿನ್ಮಾ ಹೀರೊಯಿನ್‌ಗಳು ಕ್ಯೂ ಹಚ್ಚಿದಾರಲ್ಲ? ಜೆ.ಡಿ.ಎಸ್.ಗೆ ಪೂಜಾಕೆ ಗಾಂಧಿ ಔರ್ ಮಾಳವಿಕಾದು ಅಕ್ಕ, ಶ್ರಿರಾಮುಲುದು ಪಾರ್ಟಿಗೆ ಪ್ರೇಮ್‌ದುಕೆ ರಕ್ಷಿತಾ ಸೇರ‌್ಕಂಬುಟ್ಟಿದಾರೆ. ರಮ್ಯ, ಶೃತಿ, ತಾರಾ, ಉಮಾಶ್ರಿ ಸಬ್ ಆಗ್ಲೇ ಅಲಗ್ ಅಲಗ್ ಪಾರ್ಟಿನಲ್ಲಿ ಇದಾರೆ?~ ಆಹಾ ಏನ್ ಮಾತಾಡ್ತಿಯೋ ಚಾಂದು... ಕನ್ನಡ, ಉರ್ದು, ಇಂಗ್ಲೀಷು ಎಲ್ಲ ಸೇರ‌್ಸಿ ಮಿಕ್ಸ್ ಮಸಾಲಾ!~ ನಕ್ಕ ಗುಡ್ಡೆ. ಮಿಕ್ಸ್ ಮಸಾಲಾ ಆದ್ರೆ ಓಕೆ, ಸದ್ಯ ಸೆಕ್ಸ್ ಮಸಾಲಾ ಅಲ್ವಲ್ಲ, ಅಸೆಂಬ್ಲೀಲಿ ಬ್ಲೂ ಫಿಲಂ ನೋಡಿದೋರು ಬರೀ ಮೂವರಲ್ಲಂತೆ, ಹತ್ತುಜನ ಅಂತ ಪೇಪರಲ್ಲಿ ಬಂದಿತ್ತಪ್ಪ~ ಎಂದ ದುಬ್ಬೀರ. ಹತ್ತು ಜನಾನಾ? ಇನ್ನೊಬ್ಬರು ಸೇರಿಬಿಟ್ಟಿದ್ರೆ ಫುಲ್ ಕ್ರಿಕೆಟ್ ಟೀಂ ಆಗಿಬಿಡ್ತಿತ್ತಾ? ಎಲ್ಲರೂ ಒರಿಜಿನಲ್ ಬ್ಲೂಬಾಯ್ಸ ಆಗಿಬಿಡ್ತಿದ್ರು~ ನಗುತ್ತ ಹೇಳಿದ ಗುಡ್ಡೆ. ಅದಿರ‌್ಲಿ, ಪೂಜಾ ಗಾಂಧಿ ಜೆ.ಡಿ.ಎಸ್. ಸೇರಿದ ಮೇಲೆ ಆ ಪಕ್ಷಕ್ಕೂ ಗಾಂಧಿ ಇಮೇಜ್ ಬಂದಂಗಾತಪ. ಅಲ್ಲ, ಗಾಂಧಿ ಅಂತ ಹೆಸರಿಟ್ಕೊಂಡು ಪೂಜಾ ಯಾಕೆ ಕಾಂಗ್ರೆಸ್ ಸೇರ‌್ಲಿಲ್ಲ ಅಂತ...~ ಮಿಸ್ಸಮ್ಮ ಪ್ರಶ್ನಿಸಿದಳು. ಯಾಕೆಂದ್ರೆ? ಬಿಜೆಪಿ ಸೇರಿದ್ರೆ ಹೂವು ಸಿಗುತ್ತೆ, ಜೆಡಿಎಸ್ ಸೇರಿದ್ರೆ ಹುಲ್ಲಾದ್ರು ಸಿಗುತ್ತೆ ಕಾಂಗ್ರೆಸ್, ಸೇರಿದ್ರೆ? ಸಿಗೋದು  ಕೈ~ ಅಂತ ಪೂಜಾ ಹೆದರಿರಬೇಕು!~ ಗುಡ್ಡೆ ಮಾತಿಗೆ ಎಲ್ಲರೂ ಬಿದ್ದು ಬಿದ್ದು ನಕ್ಕರು! 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.