ಒಮನ್‌ನಲ್ಲಿ ಮನೆಕೆಲಸ:ನಿಯಮ ಬಿಗಿಗೊಳಿಸಿದ ಭಾರತ

ಗುರುವಾರ , ಜೂಲೈ 18, 2019
22 °C

ಒಮನ್‌ನಲ್ಲಿ ಮನೆಕೆಲಸ:ನಿಯಮ ಬಿಗಿಗೊಳಿಸಿದ ಭಾರತ

Published:
Updated:

ದುಬೈ, (ಪಿಟಿಐ): ಕೊಲ್ಲಿ ರಾಷ್ಟ್ರ ಒಮನ್‌ಗೆ ಮನೆಕೆಲಸಕ್ಕೆಂದು ತೆರಳುವ ಮಹಿಳೆಯರ ಸೇವಾ ಒಪ್ಪಂದಗಳಲ್ಲಿ ಜೂನ್ 20ರಿಂದ ಜಾರಿಗೆ ಬರುವಂತೆ ಕೆಲವು ಬದಲಾವಣೆಗಳನ್ನು ಮಾಡುವ ಮೂಲಕ ಭಾರತ ಸರ್ಕಾರ ನಿಯಮಗಳನ್ನು ಬಿಗಿಗೊಳಿಸಿದೆ.`ಮನೆಕೆಲಸ ಮಾಡುವ ಮಹಿಳೆಯರನ್ನು ರಕ್ಷಿಸುವ ಸಲುವಾಗಿ ಮತ್ತು ಕೌಶಲ್ಯ ಹೊಂದಿದವರನ್ನು ಮನೆಕೆಲಸಕ್ಕೆ ಕಳುಹಿಸುವ ಸಲುವಾಗಿ ಬದಲಾವಣೆಗಳನ್ನು ಮಾಡಲಾಗಿದೆ~ ಎಂದು ಒಮನ್‌ನಲ್ಲಿನ ಭಾರತೀಯ ರಾಯಭಾರ ಕಚೇರಿಯ ಹೇಳಿಕೆ ತಿಳಿಸಿದೆ.ಸಾಗರೋತ್ತರ ಭಾರತೀಯ ವ್ಯವಹಾರ ಸಚಿವಾಲಯ ಮತ್ತು ಒಮನ್ ಸಚಿವಾಲಯದ ಪ್ರತಿನಿಧಿಗಳ ನಡುವೆ ನಡೆದ ಮಾತುಕತೆಯ ವೇಳೆ ಈ ವಿಷಯ ಪ್ರಸ್ತಾಪಿಸಲಾಗಿದೆ.ಹೊಸ ನಿಯಮದ ಪ್ರಕಾರ ಕೆಲಸ ನೀಡುವ ಮನೆಯ ಮಾಲೀಕರು ಪ್ರತೀ ತಿಂಗಳಿಗೆ 1000 ಒಮಾನಿ ರಿಯಾಲ್ (259 ಡಾಲರ್) ನೀಡುವ ಕುರಿತಂತೆ ವೇತನ ಪ್ರಮಾಣ ಪತ್ರ ಪ್ರದರ್ಶಿಸಬೇಕು. ಜತೆಗೆ ಕೆಲಸಕ್ಕೆ ನೇಮಿಸುವ ವೇಳೆ 1100 ರಿಯಾಲ್‌ನ ಬ್ಯಾಂಕ್ ಗ್ಯಾರಂಟಿ ಇರುವ ದಾಖಲೆಯನ್ನು ಪ್ರದರ್ಶಿಸಬೇಕು.ಸಾಧಾರಣ ಪ್ರಕರಣಗಳಲ್ಲಿ ಬ್ಯಾಂಕ್‌ನಲ್ಲಿರುವ ಈ ಭದ್ರತಾ ಹಣವನ್ನು ಮಾಲೀಕರಿಗೆ ಹಿಂತಿರುಗಿಸಲಾಗುವುದಲ್ಲದೆ ಕೆಲವು ಘಟನೆಗಳಲ್ಲಿ ಅವರನ್ನು ಸ್ವದೇಶಕ್ಕೆ ಕಳುಹಿಸಲು ಈ ಹಣವನ್ನು ಬಳಸಲಾಗುವುದು ಎಂದು ತಿಳಿಸಿದೆ.

ಒಂದು ವೇಳೆ ಮಾಲೀಕ ಅವರನ್ನು ಇನ್ನೊಬ್ಬರಿಗೆ ವಹಿಸುವುದಾದಲ್ಲಿ ಹೊಸ ಮಾಲೀಕ ಹೊಸ ಕರಾರುಪತ್ರಕ್ಕೆ ಸಹಿ ಹಾಕಬೇಕು ಎಂದೂ ಹೇಳಿಕೆ ತಿಳಿಸಿದೆ. ಜತೆಗೆ ಸಂಬಳವನ್ನು ಬ್ಯಾಂಕ್ ಮೂಲಕವೇ ನೀಡಬೇಕು ಎಂದೂ ಹೇಳಿಕೆಯಲ್ಲಿ ಸ್ಪಷ್ಟಪಡಿಸಲಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry