ಮಂಗಳವಾರ, ಮೇ 18, 2021
28 °C

ಒಮ್ಮೆ ಮಾತ್ರ ಹಜ್ ಸಬ್ಸಿಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಸರ್ಕಾರದ ಸಬ್ಸಿಡಿಯಲ್ಲಿ ಮುಸ್ಲಿಮರಿಗೆ ಅವರ ಜೀವಿತಾವಧಿಯಲ್ಲಿ ಒಮ್ಮೆ ಮಾತ್ರ ಹಜ್ ಯಾತ್ರೆಗೆ ಅವಕಾಶ ಮಾಡಿಕೊಡಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ಮಾಹಿತಿ ನೀಡಿದೆ.ಈಗಿರುವ ನಿಯಮದ ಪ್ರಕಾರ ಐದು ವರ್ಷಗಳಲ್ಲಿ ಒಮ್ಮೆ ಹಜ್ ಯಾತ್ರೆ ಮಾಡಬಹುದು. ಈ ಹಿಂದೆ ಹಜ್ ಯಾತ್ರೆಗೆ ಹೋಗದವರಿಗೆ ಆದ್ಯತೆ ನೀಡುವ ಸಲುವಾಗಿ ಸರ್ಕಾರವು ಹೊಸ ಮಾರ್ಗಸೂಚಿ ರೂಪಿಸಿದೆ ಎಂದು ಕೋರ್ಟ್‌ಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ತಿಳಿಸಲಾಗಿದೆ. ಕೇಂದ್ರವು 2012ರ ಹಜ್ ಸಬ್ಸಿಡಿ ಮೊತ್ತ ಎಷ್ಟೆಂದು ಬಹಿರಂಗಪಡಿಸಿಲ್ಲ. `ಹಜ್ ಸಮಿತಿ ಮೂಲಕ ಯಾತ್ರೆಗೆ ತೆರಳಿದವರು ಭಾರತಕ್ಕೆ ಮರಳಿದ ಬಳಿಕ ಪ್ರಯಾಣದ ವೆಚ್ಚ ನಿಖರವಾಗಿ ತಿಳಿಯುತ್ತದೆ~ ಎಂದು ಅದು ಹೇಳಿದೆ. `ಹಜ್ ಯಾತ್ರೆ ಆಕಾಂಕ್ಷಿಗಳಲ್ಲಿ 70 ವರ್ಷ ಮೇಲ್ಪಟ್ಟವರಿಗೆ ಹಾಗೂ ಸಬ್ಸಿಡಿಗಾಗಿ ಈ ಮೊದಲು ಮೂರು ಬಾರಿ ಅರ್ಜಿ ಹಾಕಿದವರಿಗೆ ಆದ್ಯತೆ ನೀಡಲಾಗುತ್ತದೆಂದು~ ಸರ್ಕಾರ ತಿಳಿಸಿದೆ.ಹಜ್ ಸಬ್ಸಿಡಿಗೆ ಸಂಬಂಧಿಸಿದಂತೆ ಫೆಬ್ರುವರಿ 24 ರಂದು ಸುಪ್ರೀಂಕೋರ್ಟ್ ಕೇಂದ್ರದಿಂದ ಕೆಲವು ಮಾಹಿತಿ ಕೇಳಿತ್ತು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.