ಒಯಿಸ್ಟರ್‌ಬೇಯಲ್ಲಿ ಕಡಲ ಖಾದ್ಯ

7

ಒಯಿಸ್ಟರ್‌ಬೇಯಲ್ಲಿ ಕಡಲ ಖಾದ್ಯ

Published:
Updated:
ಒಯಿಸ್ಟರ್‌ಬೇಯಲ್ಲಿ ಕಡಲ ಖಾದ್ಯ

ಆಯಾ ಪ್ರದೇಶಕ್ಕೆ ತಕ್ಕಂತೆ ಮೀನಿನ ಖಾದ್ಯದ ಶೈಲಿ, ರುಚಿ ಕೂಡ ಬದಲಾಗುತ್ತದೆ. ಪೆನ್ವರ್ ಸಮುದ್ರ ಆಹಾರ ರಫ್ತು ಕಂಪೆನಿ, ಕೋರಮಂಗಲದ ಜ್ಯೋತಿನಿವಾಸ ಕಾಲೇಜು ಬಳಿ ಆರಂಭಿಸಿರುವ ಒಯಿಸ್ಟರ್ ಬೇ ಸೀ ಫುಡ್ ರೆಸ್ಟೋರೆಂಟ್‌ನಲ್ಲಿ ಕೇರಳದ ಕಡಲ ಖಾದ್ಯವನ್ನು ಸವಿಯಬಹುದು. ಸಮುದ್ರ ಮೀನು, ಏಡಿಗಳ ಮಖಾನಿ ಕ್ರಾಬ್ ಬೇಕ್, ಕಟಲ್, ಡ್ರಂಕನ್ ಟೆರಿಕಾಯಿ ಟಿಲಾಪಿಯಾಗಳು ಎಂಥವರ ಬಾಯಲ್ಲೂ ನೀರೂರುವಂತೆ ಮಾಡುತ್ತವೆ. ಗ್ರಾಹಕರು ಆಯ್ಕೆ ಮಾಡಿದ ಮುಖ್ಯ ಆಹಾರದ ಜೊತೆಗೆ ಅನ್ನ, ರೊಟ್ಟಿ ಉಚಿತ. ಗುಂಡು ಪ್ರಿಯರಿಗೆ ಲೌಂಜ್ ಬಾರ್ ಸಹ ಇದೆ. ಎಲ್‌ಸಿಡಿ ಸ್ಕ್ರೀನ್ ಮೇಲೆ ಡಿಜಿಟಲ್ ಮೆನು ಪ್ರದರ್ಶನ ಇಲ್ಲಿನ ವಿಶೇಷ.ರೆಸ್ಟೋರೆಂಟ್‌ನ ಒಳ ಹೊಕ್ಕರೆ ಸಮುದ್ರ ತಟದಲ್ಲಿರುವಂತೆ ಭಾಸವಾಗುತ್ತದೆ. ಕಡಲ ಅಲೆಗಳ ಬಣ್ಣದ ರೀತಿಯ ಗೋಡೆಗಳು, ಹವಳದ ಗ್ರಿಲ್‌ಗಳು, ನೀಲಿ ಆಕಾಶದ ರೀತಿಯ ಛತ್ರಿಗಳ ಕೆಳಗೆ ಕೂತು ಊಟ ಮಾಡಿದಲ್ಲಿ ಥೇಟ್ ಸಮುದ್ರದ ತೀರದ ಬಳಿ ಇದ್ದಂತೆ ಅನ್ನಿಸುತ್ತದೆ.ಮಾಂಸಾಹಾರದ ಜೊತೆ ಸಸ್ಯಾಹಾರಿ ಆಹಾರವೂ ಇಲ್ಲಿದೆ. ಸಿಲಿಕಾನ್ ಸಿಟಿಯ ಮಂದಿಗೆ ಸಾಗರ ಆಹಾರದ ತಾಜಾ ರುಚಿ ಇಲ್ಲಿ ಲಭ್ಯ ಎಂದು ವ್ಯವಸ್ಥಾಪಕ ನಿರ್ದೇಶಕ ಫಿಲಿಫ್ಸ್ ಥಾಮಸ್ ಹೇಳುತ್ತಾರೆ.. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry