ಒಲಿಂಪಿಕ್ಸ್ಗೆ ಅರ್ಹತೆ ಗಿಟ್ಟಿಸಿದ ಪುರುಷರ ಆರ್ಚರಿ ತಂಡ
ಕೋಲ್ಕತ್ತ (ಪಿಟಿಐ): ತರುಣ್ದೀಪ್ ರಾಯ್, ಜಯಂತ್ ತಾಲೂಕ್ದಾರ್ ಹಾಗೂ ರಾಹುಲ್ ಬ್ಯಾನರ್ಜಿ ಅವರನ್ನು ಒಳಗೊಂಡ ಭಾರತ ಆರ್ಚರಿ ಪುರುಷರ ತಂಡ ಲಂಡನ್ ಒಲಿಂಪಿಕ್ಸ್ಗೆ ಅರ್ಹತೆ ಗಿಟ್ಟಿಸಿದೆ.
ಅಮೆರಿಕದ ಒಗ್ಡನ್ನಲ್ಲಿ ಶುಕ್ರವಾರ ನಡೆದ ಅಂತಿಮ ಅರ್ಹತಾ ಸುತ್ತಿನ ಟೂರ್ನಿಯಲ್ಲಿ ಎರಡನೇ ಸ್ಥಾನ ಪಡೆಯುವವರೊಂದಿಗೆ ಪುರುಷರ ತಂಡದವರು ಈ ಸಾಧನೆ ಮಾಡಿದ್ದಾರೆ. ಅಷ್ಟು ಮಾತ್ರವಲ್ಲದೇ, ವಿಶ್ವಕಪ್ ಮೂರನೇ ಹಂತದ ಫೈನಲ್ನಲ್ಲಿ ಸ್ಪರ್ಧಿಸಲೂ ಅರ್ಹತೆ ಪಡೆದಿದ್ದಾರೆ. ಭಾನುವಾರ ನಡೆಯಲಿರುವ ಫೈನಲ್ನಲ್ಲಿ ಅಮೆರಿಕವನ್ನು ಎದುರಿಸಲಿದ್ದಾರೆ.
`ಇದು ಹೆಮ್ಮೆಯ ಕ್ಷಣ. ಒಲಿಂಪಿಕ್ಸ್ ನಲ್ಲಿ ದೇಶವನ್ನು ಪ್ರತಿನಿಧಿಸಲು ನನಗೆ ಎರಡನೇ ಬಾರಿ ಅವಕಾಶ ಸಿಕ್ಕಿದೆ. ಒಲಿಂಪಿಕ್ಸ್ನಲ್ಲಿ ಪದಕ ಗೆಲ್ಲುವ ವಿಶ್ವಾಸವಿದೆ~ ಎಂದು ತರುಣ್ದೀಪ್ ಪ್ರತಿಕ್ರಿಯಿಸಿದ್ದಾರೆ. ಭಾರತ ಆರ್ಚರಿ ಸಂಸ್ಥೆ ಅಧ್ಯಕ್ಷ ವಿಜಯ್ ಕುಮಾರ್ ಮಲ್ಹೋತ್ರಾ ಕೂಡ ಈ ಸಾಧನೆಗೆ ಸಂತಸ ವ್ಯಕ್ತಪಡಿಸಿದ್ದಾರೆ. ಈಗಾಗಲೇ ದೀಪಿಕಾ ಕುಮಾರಿ, ಲೈಶ್ರಾಮ್ ಬೊಂಬಾಯಾಲಾ ದೇವಿ ಹಾಗೂ ಚೆಕ್ರೊವುಲೊ ಸುರೊ ಅವರನ್ನೊಳಗೊಂಡ ಮಹಿಳಾ ತಂಡ ಒಲಿಂಪಿಕ್ಸ್ಗೆ ಅರ್ಹತೆ ಪಡೆದಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.