ಒಲಿಂಪಿಕ್ಸ್‌ಗೆ ಸುಧಾಸಿಂಗ್ ಅರ್ಹತೆ

7

ಒಲಿಂಪಿಕ್ಸ್‌ಗೆ ಸುಧಾಸಿಂಗ್ ಅರ್ಹತೆ

Published:
Updated:
ಒಲಿಂಪಿಕ್ಸ್‌ಗೆ ಸುಧಾಸಿಂಗ್ ಅರ್ಹತೆ

ಹ್ಯೂಲ್ವಾ, ಸ್ಪೇನ್ (ಪಿಟಿಐ): ಏಷ್ಯನ್ ಕ್ರೀಡಾಕೂಟದ ಚಿನ್ನದ ಪದಕ ವಿಜೇತೆ ಭಾರತದ ಸುಧಾ ಸಿಂಗ್ (3000 ಮೀಟರ್ ಸ್ಟೀಪಲ್‌ಚೇಸ್) ಲಂಡನ್ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿದ್ದಾರೆ. ಅವರು ಇಲ್ಲಿ ನಡೆದ ಇಬೆರೊಅಮೆರಿಕನ್ ಡಿ ಅಥ್ಲೆಟಿಸ್ಮೊ ಚಾಂಪಿಯನ್‌ಷಿಪ್‌ನಲ್ಲಿ ಶುಕ್ರವಾರ ತಮ್ಮ ಹೆಸರಿನಲ್ಲಿದ್ದ ರಾಷ್ಟ್ರೀಯ ದಾಖಲೆಯನ್ನು ಉತ್ತಮಪಡಿಸಿಕೊಂಡರು.

ಮೇನಲ್ಲಿ ನಡೆದ ಶಾಂಘೈ ಡೈಮಂಡ್ ಲೀಗ್‌ನಲ್ಲಿ ಅವರು ಸ್ವಲ್ಪದರಲ್ಲಿ ಈ ಅವಕಾಶ ತಪ್ಪಿಸಿಕೊಂಡಿದ್ದರು.ಅವರು ಈ ದೂರವನ್ನು 9:47.70 ಸೆ.ಗಳಲ್ಲಿ ಕ್ರಮಿಸಿದರು. ತಮ್ಮ ಹಿಂದಿನ ದಾಖಲೆ (9:49.25 ಸೆ.)ಯನ್ನು  ಮೀರಿ ನಿಂತ ಅವರು ಇಲ್ಲಿ 11ನೇ ಸ್ಥಾನ ಪಡೆದು  ಒಲಿಂಪಿಕ್ಸ್ `ಬಿ~ ದರ್ಜೆಯ ಅರ್ಹತೆಯನ್ನು ಪಡೆದುಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry