ಒಲಿಂಪಿಕ್ಸ್‌ಗೆ 72 ಬಾಕ್ಸರ್‌ಗಳು ಅರ್ಹತೆ

7

ಒಲಿಂಪಿಕ್ಸ್‌ಗೆ 72 ಬಾಕ್ಸರ್‌ಗಳು ಅರ್ಹತೆ

Published:
Updated:

ಬಾಕು, ಅಜರ್‌ಬೈಜಾನ್ (ಪಿಟಿಐ): ಇಲ್ಲಿ ನಡೆದ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ 72 ಬಾಕ್ಸರ್‌ಗಳು ಲಂಡನ್‌ನಲ್ಲಿ 2012ರಲ್ಲಿ ನಡೆಯಲಿರುವ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ.ಈ ಚಾಂಪಿಯನ್‌ಷಿಪ್‌ನಲ್ಲಿ ಈಗಾಗಲೇ ಸೆಮಿಫೈನಲ್ ಪ್ರವೇಶಿಸಿರುವ ಬಾಕ್ಸರ್‌ಗಳು ಸೇರಿದಂತೆ ಅರ್ಹತೆ ಪಡೆದ ಒಟ್ಟು ಸಂಖ್ಯೆಯನ್ನು ಶುಕ್ರ ವಾರ ಪ್ರಕಟಿಸಲಾಯಿತು.ಇದರಲ್ಲಿ ಉಕ್ರೇನ್‌ನ (ಆರು) ಸ್ಪರ್ಧಿಗಳದ್ದೇ ಪಾರಮ್ಯ. ನಂತರದಲ್ಲಿ ಕಜಕಸ್ತಾನ್ ಹಾಗೂ ರಷ್ಯಾ (ಎರಡೂ ರಾಷ್ಟ್ರಗಳು ತಲಾ ಐದು) ಅಜರ್‌ಬೈಜಾನ್, ಕ್ಯೂಬಾ, ಇಂಗ್ಲೆಂಡ್, ಭಾರತ ಹಾಗೂ ಉಜ್ಬೇಕಿಸ್ತಾನದ ನಾಲ್ಕು ಸ್ಪರ್ಧಿಗಳು ಹಾಗೂ ಚೀನಾ, ಐರ್ಲೆಂಡ್, ಇಟಲಿ ದೇಶಗಳ ಮೂರು ಸ್ಪರ್ಧಿಗಳು ಆಸ್ಟ್ರೇಲಿಯಾ ಹಾಗೂ ಜರ್ಮನಿ ಒಬ್ಬ ಸ್ಪರ್ಧಿ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry